ಪೊಲೀಸ್ ಠಾಣೆಯ ಎದುರು ರೀಲ್ಸ್ ಮಾಡಿದ ಇಬ್ಬರು ಯುವಕರನ್ನು ಬಂಧಿಸಿದ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಗೊಂಡಾದ ವಜೀರ್ಗಂಜ್ ಪೊಲೀಸ್ ಠಾಣೆಯ ಎದುರು ಇಬ್ಬರು ಯುವಕರು ರೀಲ್ ಮಾಡಿದ್ದರು ಎನ್ನಲಾಗಿದೆ.
ಈ ಘಟನೆ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸ್ ಠಾಣೆಯ ಎದುರು ವಿಡಿಯೋ ಚಿತ್ರೀಕರಣ ಮಾಡುವುದು ಕಾನೂನುಬಾಹಿರವೇ ಅಥವಾ ಅದಕ್ಕೆ ನಿಷೇಧ ಹೇರಲಾಗಿದೆಯಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಬಂಧನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿರುವ ವಜೀರ್ಗಂಜ್ ಠಾಣಾ ಪೊಲೀಸರು, ಪೊಲೀಸ್ ಠಾಣೆಯ ಆವರಣದಲ್ಲಿ ರೀಲ್ಸ್ ಮಾಡಿದ ಇಬ್ಬರನ್ನು ಬಂಧಿಸಿದ್ದೇವೆ. ಯುವಕರು ತಾವು ಮಾಡಿದ ರೀಲ್ಸ್ನ್ನು ಎಕ್ಸ್ನಲ್ಲಿ ಶೇರ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಪೊಲೀಸರ ಈ ಟ್ವೀಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಪೊಲೀಸ್ ಠಾಣೆಯ ಆವರಣದಲ್ಲಿ ರೀಲ್ಸ್ ಮಾಡುವುದು ಅಪರಾಧವೇ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಪೊಲೀಸ್ ಠಾಣೆ ಆವರಣದ ವಿಡಿಯೋ ಮಾಡೋದ್ರಿಂದ ಕಳ್ಳರಿಗೆ ಏನಾದ್ರೂ ಪ್ರೂಫ್ ನೀಡಿದಂತೆ ಆಗುತ್ತದೆಯೇ ಎಂದು ಹೇಳೋ ಮೂಲಕ ಪೊಲೀಸರಿಗೆ ಟಾಂಗ್ ನೀಡಿದ್ದಾರೆ.
Making videos of police stations gives access to any vulnerabilities, entry way, exits & hiding places! Pretty sure it’s a crime
— Pankaj (@pankajsameold) September 16, 2023

