HomeIndiaರೈಲ್ವೇ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳಿಗೇ ಶಾಕ್: ಮನೆಯಲ್ಲಿತ್ತು ದುಡ್ಡಿನ ರಾಶಿ

ರೈಲ್ವೇ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳಿಗೇ ಶಾಕ್: ಮನೆಯಲ್ಲಿತ್ತು ದುಡ್ಡಿನ ರಾಶಿ

ಗೋರಖ್ ಪುರ: ಉತ್ತರ ಪ್ರದೇಶ ಗೋರಖ್‌ಪುರದಲ್ಲಿ 3 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ್ದಕ್ಕಾಗಿ ಈಶಾನ್ಯ ರೈಲ್ವೆಯ(ಎನ್‌ಇಆರ್) ಪ್ರಧಾನ ಮುಖ್ಯ ಮೆಟೀರಿಯಲ್ ಮ್ಯಾನೇಜರ್ ಕೆ.ಸಿ. ಜೋಶಿ ಅವರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಬಂಧಿಸಿದೆ.

ಗೋರಖ್‌ಪುರ ಮತ್ತು ನೋಯ್ಡಾದಲ್ಲಿನ ಅವರ ಅಧಿಕೃತ ಮತ್ತು ವಸತಿ ಆವರಣದಲ್ಲಿ ಶೋಧ ಕಾರ್ಯ ನಡೆಸಿ 2.61 ಕೋಟಿ ರೂ. ನಗದು ಮತ್ತು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

CBI ಪ್ರಕಾರ, ಜಿಇಎಂ ಪೋರ್ಟಲ್‌ನಲ್ಲಿ ದೂರುದಾರರ ಸಂಸ್ಥೆಯ ನೋಂದಣಿಯನ್ನು ರದ್ದುಗೊಳಿಸದಿದ್ದಕ್ಕಾಗಿ 7 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ದೂರು ದಾಖಲಿಸಲಾಗಿದೆ. ದೂರುದಾರರ ಸಂಸ್ಥೆಯು ಪ್ರತಿ ಟ್ರಕ್‌ಗೆ ತಿಂಗಳಿಗೆ 80,000 ರೂ.ಗೆ ವಾರ್ಷಿಕ ಒಪ್ಪಂದದ ಮೇಲೆ ಟ್ರಕ್‌ ಗಳನ್ನು ರೈಲ್ವೆಗೆ ಪೂರೈಸುತ್ತಿದೆ ಎಂದು ಹೇಳಲಾಗಿದೆ.

ಆರೋಪಿತ ಅಧಿಕಾರಿ ದೂರುದಾರರಿಂದ 3 ಲಕ್ಷ ರೂಪಾಯಿಗಳನ್ನು ಅನಗತ್ಯವಾಗಿ ವಸೂಲಿ ಮಾಡಿದ್ದಾರೆ. ಗೋರಖ್‌ಪುರ ಮತ್ತು ನೋಯ್ಡಾ(ಉತ್ತರ ಪ್ರದೇಶ) ನಲ್ಲಿರುವ ಆರೋಪಿಗಳ ಅಧಿಕೃತ ಮತ್ತು ವಸತಿ ಆವರಣದಲ್ಲಿ ಶೋಧ ನಡೆಸಲಾಗಿದ್ದು, 2.61 ಕೋಟಿ ರೂಪಾಯಿ ನಗದು, ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಬಂಧಿತ ಅಧಿಕಾರಿಯನ್ನು ಲಖ್ನೋದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular