ಅಪಘಾತ ಸಂಭವಿಸಿದ ವೇಳೆ ಸಂತ್ರಸ್ತರು ತೀವ್ರವಾಗಿ ಗಾಯಗೊಂಡ ಸಂದರ್ಭದಲ್ಲಿ ಅವರುಗಳ ಕುಟುಂಬ ಸದಸ್ಯರ ಮಾಹಿತಿ ಪಡೆಯುವುದು ಕಷ್ಟವಾಗುತ್ತದೆ. ಇಂತಹ ವೇಳೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡುವ ಸಲುವಾಗಿ ಹೈವೇ ಡಿಲೀಟ್ ಸಂಸ್ಥೆ ‘ರಕ್ಷಾ’ ಕ್ಯೂಆರ್ ಕೋಡ್ ಅಭಿವೃದ್ಧಿಪಡಿಸಿದ್ದು, ಅದನ್ನು ಮಂಗಳವಾರದಂದು ಬಿಡುಗಡೆಗೊಳಿಸಲಾಗಿದೆ.
ವಾಹನಗಳ ಮೇಲೆ ರಕ್ಷಾ ಕ್ಯೂಆರ್ ಕೋಡ್ ಅಂಟಿಸಿದ ಬಳಿಕ ಅಪಘಾತ ಸಂಭವಿಸಿದ ವೇಳೆ ಈ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಪಘಾತ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಬಹುದಾಗಿದೆ. ಕರೆ ಮಾಡುವ ಮತ್ತು ಸ್ವೀಕರಿಸುವವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ.
ರಕ್ಷಾ ಕ್ಯೂಆರ್ ಕೋಡ್ ಪಡೆಯಲು ವಾಹನ ಮಾಲೀಕರಿಗೆ ವಾರ್ಷಿಕ 365 ರೂಪಾಯಿ ಶುಲ್ಕ ವಿಧಿಸಲಾಗುತ್ತಿದ್ದು, ರಕ್ತದ ಗುಂಪು, ವಾಹನ ವಿಮೆ, ಆರೋಗ್ಯ ವಿಮೆ ಹಾಗೂ ಕುಟುಂಬದ ತುರ್ತು ಮಾಹಿತಿ ವಿವರಗಳನ್ನು ಸೇರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ https://highway.delite.com/#/raksha-agent-order ಜಾಲತಾಣ ಸಂಪರ್ಕಿಸಬಹುದಾಗಿದೆ.