alex Certify 5 ವರ್ಷ ನಿಯೋಜನೆ ಪೂರೈಸಿದ ನೌಕರರು ಮಾತೃ ಇಲಾಖೆಗೆ ವಾಪಸ್ ಕರೆಸಲು ಸುತ್ತೋಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5 ವರ್ಷ ನಿಯೋಜನೆ ಪೂರೈಸಿದ ನೌಕರರು ಮಾತೃ ಇಲಾಖೆಗೆ ವಾಪಸ್ ಕರೆಸಲು ಸುತ್ತೋಲೆ

ಬೆಂಗಳೂರು: ಐದು ವರ್ಷ ನಿಯೋಜನೆ ಪೂರ್ಣಗೊಳಿಸಿದ ಅಧಿಕಾರಿಗಳು, ಸಿಬ್ಬಂದಿಯನ್ನು ಕೂಡಲೇ ಮಾತೃ ಇಲಾಖೆಗೆ ವಾಪಸ್ ಕರೆಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.

ನಿಯೋಜನೆ ಮೇರೆಗೆ ಬೇರೆ ಇಲಾಖೆಗೆ ತೆರಳುವವರ ಅವಧಿಯನ್ನು 5 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಿಸಬಾರದು. ನಿಯೋಜನೆ ಮೇರೆಗೆ 5 ವರ್ಷದ ಅವಧಿಗೆ ತೆರಳಿದ ನಂತರ ಎರಡು ವರ್ಷ ಅವರು ಮಾತೃ ಇಲಾಖೆಯಲ್ಲಿ ಕೆಲಸ ಮಾಡಬೇಕು.

ಅಲ್ಲದೇ. ಈಗಾಗಲೇ ನಿಯೋಜನೆ ಮೇಲೆ ತೆರಳಿ 5 ವರ್ಷ ಪೂರ್ಣಗೊಳಿಸಿದ ಸಿಬ್ಬಂದಿಗಳು, ಅಧಿಕಾರಿಗಳನ್ನು ಮಾತ್ರ ಇಲಾಖೆಗೆ ಕರೆಸಿಕೊಳ್ಳಬೇಕು. ವೃಂದ ಮತ್ತು ನೇಮಕಾತಿಯಲ್ಲಿ ಬೇರೆ ಇಲಾಖೆಯಿಂದ ನಿಯೋಜನೆಗೆ ಅವಕಾಶ ಕಲ್ಪಿಸದಿರುವ ಹುದ್ದೆಗಳಿಗೆ ಯಾವುದೇ ಅಧಿಕಾರಿಗಳು ಸಿಬ್ಬಂದಿಯನ್ನು ನಿಯೋಜಿಸಬಾರದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...