HomeKarnataka'ಬೆಂಗಳೂರು ಬಂದ್’ ರಾಜಕೀಯ ಪ್ರೇರಿತವಾಗಿದೆ : ಡಿಸಿಎಂ ಡಿಕೆ ಶಿವಕುಮಾರ್

‘ಬೆಂಗಳೂರು ಬಂದ್’ ರಾಜಕೀಯ ಪ್ರೇರಿತವಾಗಿದೆ : ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು : ಬೆಂಗಳೂರು ಬಂದ್’ ರಾಜಕೀಯ ಪ್ರೇರಿತ ಆಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಬಂದ್’ ರಾಜಕೀಯ ಪ್ರೇರಿತವಾಗಿದೆ. ಹೋರಾಟ ಮಾಡುವ ಅವಶ್ಯಕತೆ ಇಲ್ಲ ಎಂದರು.

ಖಾಸಗಿ ಬಸ್ ಗಳಿಗೆ ತೊಂದರೆ ಆಗಿರುವುದು ನಿಜ. ಯಾಕೆಂದರೆ ನಾವು ಶಕ್ತಿ ಯೋಜನೆ ಜಾರಿಗೆ ತಂದಿದ್ದು, ಇದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಊಬರ್ ಹಾಗೂ ಆಟೋ ಚಾಲಕರದ್ದು ರಾಜಕೀಯ ಪ್ರೇರಿತ ಬಂದ್ ಎಂದು ಕಾಣಿಸುತ್ತಿದೆ. ನಾವು ಅವರ ಬಗ್ಗೆ ಬಹಳ ಸಿಂಪತಿ ಇಟ್ಟಿದ್ದೆವು, ಅವರಿಗೆ ಏನಾದರೂ ಸಹಾಯ ಮಾಡಬೇಕು ಎಂದು ಅಂದುಕೊಂಡಿದ್ದೆವು. ಆದರೆ ಅವರು ಬಂದ್ ಮಾಡುವ ಮೂಲಕ ಪ್ರಯಾಣಿಕರಿಗೆ ತೊಂದರೆ ಮಾಡಿದ್ದಾರೆ. ಎಲ್ಲವನ್ನೂ ಕೂಡ ನಾವು ಸೂಕ್ಷ್ಮವಾಗಿ ನೋಡುತ್ತಿದ್ದೆವೆ. ಪ್ರಯಾಣಿಕರಿಗೆ ತೊಂದರೆ ಕೊಡುವುದು ಒಳ್ಳೆಯದಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖಾಸಗಿ ಸಾರಿಗೆ ಒಕ್ಕೂಟದ ಮುಷ್ಕರ ರಾಯಣ್ಣ ರೈಲ್ವೆ ನಿಲ್ದಾಣದಿಂದ ಆರಂಭವಾಗಿದ್ದು, ಖಾಸಗಿ ವಾಹನಗಳ ಸಂಘಟನೆಗಳು ಫ್ರೀಡಂಪಾರ್ಕ್ ತಲುಪಿವೆ. ಫ್ರೀಡಂಪಾರ್ಕ್ನಲ್ಲಿ ಖಾಸಗಿ ವಾಹನ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular