HomeKarnataka'ಕೃಷ್ಣ ಜನ್ಮಾಷ್ಟಮಿ' ಸಂಭ್ರಮದಲ್ಲಿ ಬ್ರಿಟನ್ ಪ್ರಧಾನಿ ತಾಯಿ ಭಾಗಿ...!

‘ಕೃಷ್ಣ ಜನ್ಮಾಷ್ಟಮಿ’ ಸಂಭ್ರಮದಲ್ಲಿ ಬ್ರಿಟನ್ ಪ್ರಧಾನಿ ತಾಯಿ ಭಾಗಿ…!

UK PM Rishi Sunak's mother, mom-in-law participate in Janmashtami celebrations in Bengaluru, uk-pm-rishi-sunaks-mother-mom -in-law-participate-in-janmashtami-celebrations-in-bengaluru

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಭಾರತಕ್ಕೆ ಭೇಟಿ ನೀಡಿದ್ದು ಅವರೊಂದಿಗೆ ಕುಟುಂಬ ಸದಸ್ಯರೂ ಸಹ ಆಗಮಿಸಿದ್ದಾರೆ.

ತಮ್ಮ ಪುತ್ರನೊಂದಿಗೆ ಆಗಮಿಸಿರುವ ರಿಷಿ ಸುನಾಕ್ ಅವರ ತಾಯಿ ಉಷಾ ಸುನಾಕ್, ಬೆಂಗಳೂರಿನಲ್ಲಿರುವ ತಮ್ಮ ಬೀಗರಾದ ಇನ್ಫೋಸಿಸ್ ನಾರಾಯಣ ಮೂರ್ತಿ – ಸುಧಾ ಮೂರ್ತಿಯವರ ಮನೆಗೆ ಬಂದಿದ್ದು, ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ್ ಬಿ ಗರುಡಾಚಾರ್ ಅವರ ಜಯನಗರದ ನಿವಾಸದಲ್ಲಿ ಕೃಷ್ಣನ ವಿವಿಧ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಈ ಸಂದರ್ಭದಲ್ಲಿ ಸುಧಾ ಮೂರ್ತಿ ಅವರೊಂದಿಗೆ ಭೇಟಿ ನೀಡಿದ್ದ ಉಷಾ ಸುನಾಕ್, ಕೃಷ್ಣನ ವೈಶಿಷ್ಟ ಕಣ್ತುಂಬಿಕೊಂಡು ಪೂಜೆ ನೆರವೇರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular