ಬೆಂಗಳೂರು : ಬೆಂಗಳೂರು ಬಂದ್ ಹಿನ್ನೆಲೆ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಿಎಂಆರ್ ಸಿ ಎಲ್ ಹೆಚ್ಚುವರಿ ಮೆಟ್ರೋ ಸೇವೆ ಕಲ್ಪಿಸಿದೆ.
ಬೆಂಗಳೂರಿನಲ್ಲಿ ಜನರು ಇಂದು ಹೆಚ್ಚಾಗಿ ಮೆಟ್ರೋ ರೈಲಿಗೆ ಮುಗಿಬಿದ್ದಿದ್ದು, ಈ ಹಿನ್ನೆಲೆ ಪ್ರಯಾಣಿಕರಿಗಾಗಿ 5 ನಿಮಿಷಕ್ಕೊಂದು ಮೆಟ್ರೋ ಟ್ರೈನ್ ಬಿಡಲು ಬಿಎಂಆರ್ ಸಿ ಎಲ್ ನಿರ್ಧರಿಸಿದೆ.
ಅದೇ ರೀತಿ ಬಿಎಂಟಿಸಿ ಕೂಡ ಬಸ್ ವ್ಯವಸ್ಥೆ ಕಲ್ಪಿಸಿದೆ. ನಗರದಲ್ಲಿ 4 ಸಾವಿರ ಹೆಚ್ಚುವರಿ ಬಸ್ ಟ್ರಿಪ್ಗೆ ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಎಲೆಕ್ಟ್ರಾನಿಕ್ ಸಿಟಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.ಬೆಂಗಳೂರು ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ಖಾಸಗಿ ವಾಹನ ಸವಾರರು ಮಾತ್ರ ಬೆಂಬಲ ನೀಡಿದ್ದಾರೆ. ಇನ್ನು ನಗರದ ಹಲವೆಡೆ ಖಾಸಗಿ ವಾಹನಗಳ ಮೇಲೆ ಕಲ್ಲುತೂರಾಟ, ಮೊಟ್ಟೆ ತೂರಾಟ ಕೂಡ ಮಾಡಲಾಗಿದೆ.