
ಏರ್ ಪೋರ್ಟ್ ನಿಂದ ಆಗಮಿಸುವ ವೇಳೆ ಏರ್ಪೋರ್ಟ್ ಟ್ಯಾಕ್ಸಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಬಗ್ಗೆ ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿದ್ದಾರೆ.
ನಾನು ಏರ್ ಪೋರ್ಟ್ ನಿಂದ ಬರುತ್ತಿದ್ದಾಗ ಟ್ಯಾಕ್ಸಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಾರಿನಲ್ಲಿ ನಾನು, ನನ್ನ ಹೆಂಡತಿ ಹಾಗೂ 6 ವರ್ಷದ ಮಗ ಇದ್ದೆವು, ದಾಳಿಯಿಂದ ಬಹಳ ಆತಂಕವಾಯಿತು. ಟ್ಯಾಕ್ಸಿಯ ಗಾಜುಗಳು ಪುಡಿಪುಡಿಯಾಗಿವೆ.. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಏನಾಗಿದೆ? ಎಂದು ಟ್ವೀಟ್ ಮಾಡಿದ್ದಾರೆ.
Hey @CPBlr
What's happening to the law and order in Bangalore?
My brother, his wife and their 6 year old kid had a horrid experience while traveling in a cab from the airport to their home. The cab was pelted with stones which shattered the front door glass (1/3)— Ric_Lucky🏖🏕 (@riclucky143) September 10, 2023
ಪ್ರಯಾಣಿಕರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗುತ್ತಿದ್ದ ಮೂರು ಟ್ಯಾಕ್ಸಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇವುಗಳಲ್ಲಿ ಎರಡು ಊಬರ್ ಟ್ಯಾಕ್ಸಿ ಆಗಿದ್ದು, ಮತ್ತೊಂದು ಕೆಎಸ್‌ಟಿಡಿಸಿಯ ಟ್ಯಾಕ್ಸಿಯಾಗಿದೆ.ಸೋಮವಾರ ಮುಂಜಾನೆ ದೇವನಹಳ್ಳಿ ಬಳಿ ಕಿಡಿಗೇಡಿಗಳು ಟ್ಯಾಕ್ಸಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಒಂದು ಟ್ಯಾಕ್ಸಿಯ ಮುಂಭಾಗದ ಗಾಜು ಒಡೆದಿದೆ, ಮತ್ತೊಂದು ಕಡೆ ಟ್ಯಾಕ್ಸಿಯ ಡ್ರೈವರ್ ಸೀಟಿನ ಕಿಟಕಿ ಗ್ಲಾಸು ಪುಡಿ ಪುಡಿಯಾಗಿದೆ.

