
ಮೊರಾಕೊದಲ್ಲಿ ಶುಕ್ರವಾರ ತಡರಾತ್ರಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 296 ಜನ ಸಾವನ್ನಪ್ಪಿದ್ದಾರೆ. ರಾತ್ರಿ 11 ಗಂಟೆಯ ನಂತರ ಮರಕೇಶ್ನ ನೈಋತ್ಯಕ್ಕೆ 72 ಕಿಮೀ ಮತ್ತು ಅಟ್ಲಾಸ್ ಪರ್ವತ ಪಟ್ಟಣವಾದ ಒಕೈಮೆಡೆನ್ನಿಂದ 56 ಕಿಮೀ ಪಶ್ಚಿಮಕ್ಕೆ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ತುಲನಾತ್ಮಕವಾಗಿ 18.5 ಕಿಮೀ ಆಳದಲ್ಲಿದೆ. ಭೂಕಂಪವು ಪ್ರಮುಖ ನಗರಗಳಲ್ಲಿನ ಕಟ್ಟಡಗಳಿಗೆ ಭಾರಿ ಹಾನಿಯನ್ನುಂಟು ಮಾಡಿತು ಮತ್ತು ನಿವಾಸಿಗಳಲ್ಲಿ ಭೀತಿಯನ್ನುಂಟು ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಭೂಕಂಪನದ ವಿಡಿಯೋ ವೈರಲ್ ಆಗಿದ್ದು, ಭಯಭೀತರಾದ ಜನ ಶಾಪಿಂಗ್ ಸೆಂಟರ್, ರೆಸ್ಟೋರೆಂಟ್ಗಳು ಮತ್ತು ಅಪಾರ್ಟ್ಮೆಂಟ್ ಕಟ್ಟಡಗಳಿಂದ ಓಡಿಹೋಗುತ್ತಿರುವ ದೃಶ್ಯ ಬೆಚ್ಚಿ ಬೀಳಿಸಿದೆ.

