alex Certify ರಸ್ತೆಯಲ್ಲಿ ಕಾಣಿಸಿಕೊಂಡ ಹೆಲಿಕಾಪ್ಟರ್​: ತಲೆಕೆಡಿಸಿಕೊಂಡ ಸಿಲಿಕಾನ್​ ಸಿಟಿ ಮಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಯಲ್ಲಿ ಕಾಣಿಸಿಕೊಂಡ ಹೆಲಿಕಾಪ್ಟರ್​: ತಲೆಕೆಡಿಸಿಕೊಂಡ ಸಿಲಿಕಾನ್​ ಸಿಟಿ ಮಂದಿ

ನಿಮ್ಮ ಪಾಡಿಗೆ ನೀವು ಕಾರಲ್ಲಿ ಹೋಗುತ್ತಿರುವಾಗ ಸಡನ್​ ಆಗಿ ನಿಮ್ಮ ಪಕ್ಕದಲ್ಲಿ ಹೆಲಿಕಾಪ್ಟರ್​ ತಂದು ನಿಲ್ಲಿಸಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು..?

ಬೆಂಗಳೂರಿನಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದೆ. ಅತೀ ಹೆಚ್ಚು ಸಂಚಾರ ದಟ್ಟಣೆಯನ್ನು ಹೊಂದಿರುವ ನಗರದಲ್ಲಿ ರಸ್ತೆ ಬದಿಯಲ್ಲಿ ಹೆಲಿಕಾಪ್ಟರ್​ ನಿಂತಿರೋದು ಟ್ರೋಲಿಗರಿಗೆ ಆಹಾರವಾಗಿದೆ.

ಎಕ್ಸ್​ನಲ್ಲಿ ಈ ಘಟನೆಯ ಫೋಟೋವನ್ನು ಶೇರ್​ ಮಾಡಲಾಗಿದೆ. ಹೆಲಿಕಾಪ್ಟರ್​ ಹಾದು ಹೋಗುವವರೆಗೆ ಜನರು ತಮ್ಮ ಆಟೋ ಹಾಗೂ ಬೈಕ್​​ ನಿಲ್ಲಿಸಿದ್ದನ್ನು ಕಾಣಬಹುದಾಗಿದೆ. ಹೆಲಿಕಾಪ್ಟರ್​ನಿಂದಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ ಎನ್ನಲಾಗಿದೆ. ಈ ಫೋಟೋವನ್ನು ಮೀಮ್ಸ್​ ರೀತಿಯಲ್ಲಿ ಶೇರ್ ಮಾಡಲಾಗ್ತಿದೆ.

ಕೆಲವು ಅಧಿಕಾರಿಗಳು ಹೆಲಿಕಾಪ್ಟರ್​ ನಿರ್ವಹಿಸೋದು ಹಾಗೂ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರೋದನ್ನು ದೃಶ್ಯಗಳಲ್ಲಿ ಕಾಣಬಹುದಾಗಿದೆ. ಈ ಫೋಸ್ಟ್​ಗೆ ಅನೇಕರು ಸಖತ್​ ಕಾಮಿಡಿಯಾಗಿ ಕಮೆಂಟ್​ ಮಾಡಿದ್ದಾರೆ. ಅನೇಕರು ಇಂದು ಆಫೀಸಿಗೆ ತಡವಾಗಿ ಹೋದರೆ ಹೆಲಿಕಾಪ್ಟರ್ ಬಂದ ಕಾರಣವನ್ನು ಬಾಸ್​ಗೆ ನೀಡಬಹುದು ಎಂದು ಹೇಳಿದ್ದರೆ ಇನ್ನೂ ಕೆಲವರು ಇಂತಹ ಹೆಲಿಕಾಪ್ಟರ್​ ಜೊತೆ ಪ್ರಯಾಣ ಮಾಡುವ ಅವಕಾಶ ಸಿಕ್ಕರೆ ನಾನು ಖಂಡಿತವಾಗಿಯೂ ಬೆಂಗಳೂರು ಟ್ರಾಫಿಕ್​ ಗೆ ತಲೆಕೆಡಿಸಿಕೊಳ್ಳೋದಿಲ್ಲ ಎಂದು ಹೇಳಿದ್ದಾರೆ.

— Aman Surana (@surana620) September 7, 2023

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...