HomeIndiaಸಾರ್ವಜನಿಕರ ಗಮನಕ್ಕೆ : ಉಚಿತವಾಗಿ ‘ಆಧಾರ್’ ಅಪ್ ಡೇಟ್ ಮಾಡಲು ಡಿ.14 ರವರೆಗೆ ಅವಧಿ ವಿಸ್ತರಣೆ

ಸಾರ್ವಜನಿಕರ ಗಮನಕ್ಕೆ : ಉಚಿತವಾಗಿ ‘ಆಧಾರ್’ ಅಪ್ ಡೇಟ್ ಮಾಡಲು ಡಿ.14 ರವರೆಗೆ ಅವಧಿ ವಿಸ್ತರಣೆ

ಉಚಿತವಾಗಿ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಡಿ.14 ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದ್ದು, ಈ ಮೂಲಕ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಸೆಪ್ಟೆಂಬರ್ 14 ಕ್ಕೆ ಇದ್ದ ಉಚಿತ ನವೀಕರಣದ ಗಡುವು ಡಿಸೆಂಬರ್ 14 ರವರೆಗೆ ವಿಸ್ತರಿಸಿದೆ. ಈ ಮೂಲಕ ಇನ್ನೂ ಮೂರು ತಿಂಗಳ ಕಾಲಾವಕಾಶ ನೀಡಿದೆ.

10 ವರ್ಷಗಳಿಗಿಂತಲೂ ಹೆಚ್ಚು ಕಾಲ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸದಿರುವವರು ಈ ಉಚಿತ ನವೀಕರಣ ಯೋಜನೆಯಡಿಯಲ್ಲಿ ತಮ್ಮ ಆಧಾರ್ ವಿವರಗಳನ್ನು ಬದಲಾಯಿಸಬಹುದು ಎಂದು UIDAI ಸೂಚಿಸುತ್ತದೆ. ಆದ್ದರಿಂದ ನೀವು ಸಹ ಈ ವರ್ಗಕ್ಕೆ ಸೇರಿದವರಾಗಿದ್ದರೆ ನೀವು ಆಧಾರ್ ವಿವರಗಳನ್ನು ನವೀಕರಿಸಬಹುದು.

ಆಧಾರ್ ಉಚಿತ ನವೀಕರಣಕ್ಕೆ ಅದ್ಭುತ ಪ್ರತಿಕ್ರಿಯೆ ದೊರೆತಿರುವ ಹಿನ್ನೆಲೆ ಗಡುವನ್ನು ವಿಸ್ತರಿಸಲಾಗಿದೆ ಎಂದು ತಿಳಿದು ಬಂದಿದೆ. ಜನರು ಮೈ ಆಧಾರ್ ಪೋರ್ಟಲ್ ಮೂಲಕ ತಮ್ಮ ಆಧಾರ್ ದಾಖಲೆಯಲ್ಲಿನ ವಿವರಗಳನ್ನು ಉಚಿತವಾಗಿ ನವೀಕರಿಸಬಹುದು. ಆದ್ದರಿಂದ, ನೀವು ಇನ್ನೂ ನಿಮ್ಮ ಆಧಾರ್ ವಿವರಗಳನ್ನು ಬದಲಾಯಿಸಲು ಬಯಸಿದರೆ, ನೀವು ಈ ಸೇವೆಗಳನ್ನು ಉಚಿತವಾಗಿ ಪಡೆಯಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಧಾರ್ ವಿವರಗಳನ್ನು ನವೀಕರಿಸಲು ಐಡಿ ಪ್ರೂಫ್ ಮತ್ತು ವಿಳಾಸ ಪುರಾವೆಯಂತಹ ದಾಖಲೆಗಳು ಬೇಕಾಗುತ್ತವೆ.
ಅಂತೆಯೇ, ನೀವು ಆಧಾರ್ ಕೇಂದ್ರಕ್ಕೆ ಹೋಗಿ ಆಧಾರ್ ವಿವರಗಳನ್ನು ನವೀಕರಿಸಲು ಬಯಸಿದರೆ, ನೀವು ಹಣವನ್ನು ಪಾವತಿಸಬೇಕಾಗುತ್ತದೆ. ರೂ. 25 ಶುಲ್ಕ ವಿಧಿಸಲಾಗುತ್ತದೆ. ಆಧಾರ್ ನೋಂದಣಿ ಅಥವಾ ನವೀಕರಣ ಸ್ಥಿತಿಯನ್ನು ಪರಿಶೀಲಿಸಲು ನೀವು 1947 ಗೆ ಕರೆ ಮಾಡಬಹುದು. ಇದು ಟೋಲ್ ಫ್ರೀ ಸಂಖ್ಯೆಯಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular