HomeKarnataka`ಬಗರ್ ಹುಕುಂ ಸಾಗುವಳಿ'ದಾರರಿಗೆ ಭರ್ಜರಿ ಗುಡ್ ನ್ಯೂಸ್ : `ಹಕ್ಕುಪತ್ರ’ ವಿತರಣೆಗೆ ಮಹತ್ವದ ಕ್ರಮ

`ಬಗರ್ ಹುಕುಂ ಸಾಗುವಳಿ’ದಾರರಿಗೆ ಭರ್ಜರಿ ಗುಡ್ ನ್ಯೂಸ್ : `ಹಕ್ಕುಪತ್ರ’ ವಿತರಣೆಗೆ ಮಹತ್ವದ ಕ್ರಮ

ಶಿವಮೊಗ್ಗ : ಬಗರ್ ಹುಕುಂ ಸಾಗುಳವಳಿದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ನಿಜವಾದ ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗದ್ದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಫಾರಂ 57 ವಿಲೇ ಮಾಡಲು ತಹಶೀಲ್ದಾರರಿಗೆ ಹೊಸ ಆ್ಯಪ್ ನೀಡಲಾಗುವುದು. ಇದರಲ್ಲಿ ಡಾಟಾ ಅಪ್‍ಲೋಡ್ ಮಾಡಿದಾಗ ಅದು ಸರ್ಕಾರಿ ಅಥವಾ ಅರಣ್ಯ ಭೂಮಿ ಎಂದು ಗೊತ್ತಾಗುತ್ತದೆ. 15 ವರ್ಷದ ಸ್ಯಾಟಲೈಟ್ ಇಮೇಜ್ ಸಿಗಲಿದೆ. ಗ್ರಾಮ ಲೆಕ್ಕಿಗರು ಪ್ರತಿ ಮೂರು ತಿಂಗಳಿಗೆ ಕ್ಷೇತ್ರ ಭೇಟಿ ನೀಡಿ ಒತ್ತುವರಿ ಬಗ್ಗೆ ಪರಿವೀಕ್ಷಿಸಿ ವರದಿ ನೀಡಬೇಕು ಎಂದ ಅವರು ನಿಜವಾದ ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಮತ್ತು ಸರ್ಕಾರಿ ಜಾಗವನ್ನು ಭದ್ರಪಡಿಸುವ ಕೆಲಸವನ್ನು ಕಂದಾಯ ಇಲಾಖೆ ಅಧಿಕಾರಿ/ಸಿಬ್ಬಂದಿ ಮಾಡಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರ ಇರುವುದು ಜನ ಜೀವನ ಸುಲಲಿತಗೊಳಿಸುವುದಕ್ಕೆ. ಜನರು ಹೆಚ್ಚಾಗಿ ಬರುವುದು ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖೆಗೆ. ಆದ್ದರಿಂದ ಜನರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಂಡು ಅವರನ್ನು ಹೆಚ್ಚು ಅಲೆದಾಡಿಸದೇ ಗುಣಮಟ್ಟದ ಮತ್ತು ತ್ವರಿತ ಸೇವೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ಆಡಳಿತ ಯಂತ್ರದಲ್ಲಿ ಬದಲಾವಣೆಗಳನ್ನು ತರಲಾಗುತ್ತಿದೆ, ಅದನ್ನು ಪರಿಣಾಮಕಾರಿಯಾಗಿ ಅಧಿಕಾರಿ/ಸಿಬ್ಬಂದಿ ವರ್ಗದವರು ಅನುಷ್ಟಾನಕ್ಕೆ  ತರಬೇಕೆಂದರು.

2019 ರಿಂದ 2022 ರವರೆಗೆ ನೆರೆಸಂತ್ರಸ್ಥರ ಪುನರ್ವಸತಿ ಯೋಜನೆಯಡಿ ಶುರು ಮಾಡದೇ ಇರುವ ಮನೆಗಳ ಕುರಿತು ತಹಶೀಲ್ದಾರ್ ಪರಿಶೀಲಿಸಿ, ನೋಟಿಸ್ ನೀಡಿ ಪ್ರಕರಣ ಇತ್ಯರ್ಥಪಡಿಸಬೇಕು. ಹಾಗೂ ಬಾಕಿ ಉಳಿಸಿರುವ ಶಾಲೆ-ಅಂಗನವಾಡಿ ಸಣ್ಣಪುಟ್ಟ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಸಂಬಂಧಿಸಿದ ಅಧಿಕಾರಿಗೆ ತಾಕೀತು ಮಾಡಿದರು.

ಸಮಸ್ಯಾತ್ಮಕ ಪೈಕಿ ಆರ್‍ಟಿಸಿ ಗಳನ್ನು ಒಂದುಗೂಡಿಸಿ ಸರ್ವೇ ಮಾಡಿಸಲು  ಕ್ರಮ ವಹಿಸಲಾಗುತ್ತಿದ್ದು ಜನರ ಬಹಳ ವರ್ಷಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಸುಧಾರಣೆ ಕ್ರಮಗಳು ಆಗುತ್ತಿವೆ. ಆದರೆ ಇನ್ನೂ ಹಲವಾರು ಸವಾಲುಗಳಿವೆ ಎಂದರು.

 ಜಿಲ್ಲೆಯಲ್ಲಿ 97 ಸಾವಿರ ಫಾರ್ಮ್ 57 ಅರ್ಜಿಗಳು ಬಂದಿವೆ. ಇವನ್ನು ಇತ್ಯರ್ಥಪಡಿಸಲು ಸಮಿತಿ ರಚನೆ ಮಾಡಲಾಗುವುದು. ಸದರಿ ಸಮಿತಿಯು ನಿಜವಾದ ಬಡ ಸಾಗುವಳಿದಾರರನ್ನು ಗುರುತಿಸಿ ಅವರ ಜಮೀನಿಗೆ ತ್ವರಿತವಾಗಿ ಹಕ್ಕುಪತ್ರ ನೀಡುವ ಕೆಲಸ ಆಗಬೇಕು. ರೈತರ ಹೆಸರಿನಲ್ಲಿ ಬೇರೆಯವರು ಭೂಮಿ ಕಬಳಿಸುವಂತಾಗಬಾರದು. ಕಡೂರು ತಾಲ್ಲೂಕಿನಲ್ಲಿ ಅನರ್ಹರಿಗೆ ಸಾವಿರಾರು ಎಕರೆ ಜಮೀನು ಮಂಜೂರು ಮಾಡಿದ ಅಧಿಕಾರಿಗಳ ವಿರುದ್ದ ಶಿಸ್ತಿನ ಕ್ರಮ ವಹಿಸಲಾಗಿದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಅಧಿಕಾರಿಗಳು ಕೆಲಸ ಮಾಡಬೇಕು. ಅರ್ಹರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು.

 ಜೆಸ್ಲಿಪ್ ಮತ್ತು ಪೌತಿ ಖಾತೆ ಬಿಟ್ಟು ಉಳಿದ ಖಾತೆಗಳನ್ನು ಸ್ವಯಂಚಾಲಿತವಾಗಿ ಮಾಡುವ ಯೋಜನೆ ಇದೆ. ವಿವಾದಿತ ಮ್ಯುಟೇಷನ್‍ಗಳ ಪೆಂಡಿನ್ಸಿ ಜಿಲ್ಲೆಯಲ್ಲಿ ಕಡಿಮೆ ಇದೆ. ಇಂತಹ ಪ್ರಕರಣ ಇತ್ಯರ್ಥಕ್ಕೆ ಸರಾಸರಿ 1 ವರ್ಷ ತೆಗೆದುಕೊಂಡಿದ್ದ ಸಮಯವನ್ನು 135 ದಿನಗಳಿಗೆ ಇಳಿಸಿದ್ದೀರಿ. ಉತ್ತಮ ಬೆಳಿವಣಿಗೆ ಆದರೆ ಇದು ಗರಿಷ್ಟ 90 ದಿನಗಳಲ್ಲಿ ವಿಲೇ ಆಗಬೇಕು. ತಾವು 60 ರಿಂದ 65 ದಿನಗಳಲ್ಲಿ ವಿಲೇ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular