BREAKING : ಮೋಹಕ ತಾರೆ ರಮ್ಯಾ ಸಾವಿನ `ಫೇಕ್ ಸುದ್ದಿ’ಗೆ ಶಾಕ್ ಆದ ಫ್ಯಾನ್ಸ್ : ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು..!

ಬೆಂಗಳೂರು : ಮೋಹಕ ತಾರೆ ರಮ್ಯಾ ಸಾವಿನ `ಫೇಕ್ ಸುದ್ದಿ’ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.

ನಟ ವಿಜಯ್ ರಾಘವೇಂದ್ರ ಅವರ ಪತ್ನಿಯ ಅಕಾಲಿಕ ನಿಧನದಿಂದ ಇನ್ನೂ ಚೇತರಿಸಿಕೊಳ್ಳದ ಜನ ನಟಿ ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನಾ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದಾರೆ.
ಈ ಹಿಂದೆ ಎಕ್ಸ್ ನಲ್ಲಿ ಅನೇಕ ಜನರು ರಮ್ಯಾ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದಲ್ಲದೇ ಕೆಲವು ತಮಿಳು ಮಾಧ್ಯಮಗಳು ಕೂಡ ರಮ್ಯಾ “ನಿಧನರಾದರು” ಎಂದು ಹೇಳಿದವು. ಆದರೆ ರಮ್ಯಾ ಅವರಿಗೆ ಏನೂ ಆಗಿಲ್ಲ, ಆರೋಗ್ಯವಾಗಿ ಆಗಿದ್ದಾರೆ ಎಂದು ತಿಳಿದು ಬಂದಿದೆ. ಸುಖಾ ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಿದ ಮೀಡಿಯಾ ಹಾಗೂ ಕಿಡಿಗೇಡಿಗಳಿಗೆ ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದಾರೆ.

ಸ್ಯಾಂಡಲ್ವುಡ್ ನಟಿ ರಮ್ಯಾ ಇನ್ನಿಲ್ಲ ಎನ್ನುವ ಸುಳ್ಳು ಸುದ್ದಿ ಹರಿದಾಡಿದ್ದು ರಮ್ಯಾ ಅಭಿಮಾನಿಗಳು ಸಿಟ್ಟಾಗಿದ್ದಾರೆ. ತಮಿಳಿನ ಕೆಲ ವೆಬ್ಸೈಟ್ ತಮಿಳು ಮೂಲದ ಸೋಷಿಯಲ್ ಮೀಡಿಯಾ ಬಳಕೆದಾರರು ರಮ್ಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹಬ್ಬಿಸಿದ್ದರು.  ರಮ್ಯಾ ಅವರು ಚೆನ್ನಾಗಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಅವರ ಸ್ನೇಹಿತೆ ಸುನಯನಾ ಟ್ವಿಟ್ ಮೂಲಕ ಖಚಿತಪಡಿಸಿದ್ದಾರೆ. ನಟಿ ರಮ್ಯಾ ಸದ್ಯ ಯುರೋಪ್ ಪ್ರವಾಸದಲ್ಲಿದ್ದಾರೆ. ಕೆಲವೇ ದಿನಗಳ ಹಿಂದೆ ಅಲ್ಲಿಂದ ಫೋಟೋಗಳು ಹಾಗೂ ವಿಡಿಯೋ ಕೂಡಾ ಶೇರ್ ಮಾಡಿದ್ದರು.

https://twitter.com/sunayanasuresh/status/1699314899829366995?ref_src=twsrc%5Etfw%7Ctwcamp%5Etweetembed%7Ctwterm%5E1699314899829366995%7Ctwgr%5Ee69f7ef2cf4f4b2d388d1518a9037df138680a4b%7Ctwcon%5Es1_&ref_url=https%3A%2F%2Fkannada.hindustantimes.com%2Fentertainment%2Fsandalwood-news-actress-ramya-died-due-to-heart-attack-fake-news-goes-viral-on-social-media-kannada-film-industry-news-181693984901387.html

TAGGED:
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read