ನವದೆಹಲಿ: ಕೊಟಕ್ ಮಹೀಂದ್ರಾ ಬ್ಯಾಂಕಿನ ಸಿಇಒ ಮತ್ತು ಎಂಡಿ ಹುದ್ದೆಗೆ ನಿನ್ನೆ ಏಷ್ಯಾದ ಅತ್ಯಂತ ಶ್ರೀಮಂತ ಬ್ಯಾಂಕರ್ ಉದಯ್ ಕೋಟಕ್ ಅವರು ರಾಜೀನಾಮೆ ನೀಡಿದ್ದಾರೆ.
ಅವರು ಮಾಡಿದ್ದ 10,000 ರೂ.ಗಳ ಹೂಡಿಕೆಯು ಅವರಿಗೆ ಕೋಟಿಗಟ್ಟಲೆ ಆದಾಯವನ್ನು ನೀಡಿದೆ ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಅವರು “ನಾವು ಈಗ ವಿಶ್ವಾಸ ಮತ್ತು ಪಾರದರ್ಶಕತೆಯ ಮೂಲ ತತ್ವಗಳ ಮೇಲೆ ರಚಿಸಲಾದ ಪ್ರಮುಖ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಯಾಗಿದ್ದೇವೆ. ನಾವು ನಮ್ಮ ಪಾಲುದಾರರಿಗೆ ಮೌಲ್ಯವನ್ನು ರಚಿಸಿದ್ದೇವೆ ಮತ್ತು 1 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಒದಗಿಸಿದ್ದೇವೆ. ನಾವು 1985 ರಲ್ಲಿ ಹೂಡಿದ್ದ 10,000 ರೂ. ಇಂದು ಸುಮಾರು 300 ಕೋಟಿ ರೂ.ಆಗಿದೆ ಎಂದು ಹೇಳಿದ್ದಾರೆ.
ಈ ಭಾರತೀಯ ಒಡೆತನದ ಸಂಸ್ಥೆ ಭಾರತವನ್ನು ಸಾಮಾಜಿಕ ಮತ್ತು ಆರ್ಥಿಕ ಶಕ್ತಿಕೇಂದ್ರವಾಗಿ ಪರಿವರ್ತಿಸುವಲ್ಲಿ ಇನ್ನೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಅವರು ಹೇಳಿದರು. ನಾವು ಈಗ ಅಗ್ರಗಣ್ಯ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಯಾಗಿದ್ದು, ನಂಬಿಕೆ ಮತ್ತು ಪಾರದರ್ಶಕತೆಯ ಮೂಲ ತತ್ವಗಳ ಮೇಲೆ ನಮ್ಮ ಸಂಸ್ಥೆಯನ್ನು ರಚಿಸಲಾಗಿದೆ. ನಾವು ನಮ್ಮ ಪಾಲುದಾರರಿಗೆ ಮೌಲ್ಯವನ್ನು ಒದಗಿಸಿದ್ದೇವೆ ಎಂದಿದ್ದಾರೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ಉದಯ್ ಕೋಟಕ್ ರಾಜೀನಾಮೆ ಸಲ್ಲಿಸಿದ್ದಾರೆ. ಅವಧಿಗೂ ಮೂರು ತಿಂಗಳು ಮೊದಲೇ ಅವರು ತಮ್ಮ ಸ್ಥಾನ ತೆರವುಗೊಳಿಸಿದ್ದಾರೆ.
ಕೋಟಕ್ ಮಹೀಂದ್ರಾ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಉದಯ್ ಕೋಟಕ್ ರಾಜೀನಾಮೆ ನೀಡಿದ್ದಾರೆ. ಕೋಟಕ್ ಮಹೀಂದ್ರಾ ಬ್ಯಾಂಕಿನ ಜಂಟಿ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಗುಪ್ತಾ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಉದಯ್ ಕೋಟಕ್ ಅವರು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸ್ಥಾನದಿಂದ ಕೆಳಗಿಳಿದಿದ್ದು, ನಡೆದ ಬ್ಯಾಂಕ್ ಮಂಡಳಿಯ ಸಭೆಯಲ್ಲಿ ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ ಅವರ ರಾಜೀನಾಮೆಯನ್ನು ಪರಿಗಣಿಸಲಾಗಿದೆ.