HomeKarnatakaಖಾತೆಗೆ ಹಣ ಬಂದ ಖುಷಿಯಲ್ಲಿದ್ದ ಗೃಹಲಕ್ಷ್ಮಿಯರಿಗೆ ಶಾಕ್: ಹಳೆ ಸಾಲಕ್ಕೆ ಗ್ಯಾರಂಟಿ ಹಣ ಜಮಾ

ಖಾತೆಗೆ ಹಣ ಬಂದ ಖುಷಿಯಲ್ಲಿದ್ದ ಗೃಹಲಕ್ಷ್ಮಿಯರಿಗೆ ಶಾಕ್: ಹಳೆ ಸಾಲಕ್ಕೆ ಗ್ಯಾರಂಟಿ ಹಣ ಜಮಾ

ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಗ್ಯಾರಂಟಿ ಜಾರಿಗೆ ತಂದಿದ್ದು, 1.10 ಕೋಟಿ ಯಜಮಾನಿಯರ ಖಾತೆಗೆ ತಲಾ 2 ಸಾವಿರ ರೂ. ಜಮಾ ಮಾಡಿದೆ.

ಗ್ಯಾರಂಟಿ ಯೋಜನೆಯ ಹಣ ಬಹುತೇಕ ಮಹಿಳೆಯರ ಕೈ ಸೇರುವ ಮೊದಲೇ ಬ್ಯಾಂಕುಗಳ ಪಾಲಾಗಿದೆ. ಬುಧವಾರ ಖಾತೆಗೆ ಹಣ ಜಮಾ ಆಗಿದ್ದರೂ, ಹೆಚ್ಚಿನ ಮಹಿಳೆಯರಿಗೆ ಹಣ ಕೈ ಸೇರಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖಾತೆಗೆ ಬಂದ ಹಣ ಪಡೆಯಲು ಮಹಿಳೆಯರು ಮುಗಿಬಿದ್ದ ಕಾರಣ ಬ್ಯಾಂಕುಗಳಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ. ಹಣ ಪಡೆಯಲು ಮಹಿಳೆಯರು ಸಾಲುಗಟ್ಟಿ ನಿಲ್ಲುವಂತಾಗಿದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮಹಿಳೆಯರ ಖಾತೆಗೆ ಬಂದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಹಣ ಹಳೆಯ ಸಾಲಕ್ಕೆ ಜಮಾ ಆಗಿದೆ.

ಗ್ರಾಮೀಣ ಪ್ರದೇಶದ ಜನರು, ರೈತರು ಮನೆಯೊಡತಿ ಹೆಸರಿನಲ್ಲಿ ಬ್ಯಾಂಕುಗಳಲ್ಲಿ ವಿವಿಧ ಸಾಲ ಪಡೆದುಕೊಂಡಿರುತ್ತಾರೆ. ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸಲು ಸಾಧ್ಯವಾಗುವುದಿಲ್ಲ. ಬಡ್ಡಿ ಸಹಿತವಾಗಿ ಸಾಲ ಬೆಳೆದಿದ್ದು, ಗೃಹಲಕ್ಷ್ಮಿ ಯೋಜನೆಯ ಗ್ಯಾರಂಟಿ ಹಣ ಅಂತಹ ಖಾತೆಗೆ ಜಮಾ ಆದ ಕೂಡಲೇ ಬ್ಯಾಂಕುಗಳು ಹಳೇ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿವೆ. ಹೀಗಾಗಿ ಮಹಿಳೆಯರ ಕೈ ಸೇರುವ ಮೊದಲೇ ಗ್ಯಾರಂಟಿ ಹಣ ಬ್ಯಾಂಕುಗಳ ಪಾಲಾಗುತ್ತಿದೆ. ಕೆಲವರು ಹೊಸ ಖಾತೆ ಸಂಖ್ಯೆ ನೀಡಿದ್ದರೂ ಹಳೆ ಖಾತೆಗೆ ಹಣ ಜಮಾ ಆಗಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular