ICC ODI Rankings : 4ನೇ ಸ್ಥಾನಕ್ಕೆ ಜಿಗಿದ ಸಿರಾಜ್, ಟಾಪ್-10ರಲ್ಲಿ ಕುಲ್ದೀಪ್

ನವದೆಹಲಿ : ಹೊಸದಾಗಿ ಬಿಡುಗಡೆಯಾದ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿ ಬಾಬರ್ ಅಜಮ್ (877), ಬೌಲಿಂಗ್ನಲ್ಲಿ ಜೋಶ್ ಹೇಜಲ್ವುಡ್ (705) ಮತ್ತು ಅಲ್ರೌಂಡರ್ ವಿಭಾಗದಲ್ಲಿ ಶಕೀಬ್ ಅಲ್ ಹಸನ್ (371) ಅಗ್ರಸ್ಥಾನದಲ್ಲಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ಶುಬ್ಮನ್ ಗಿಲ್ (ನಾಲ್ಕನೇ ಸ್ಥಾನ) ಮತ್ತು ವಿರಾಟ್ ಕೊಹ್ಲಿ (9 ನೇ ಸ್ಥಾನ) ಅಗ್ರ 10 ರಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಡುಸೆನ್, ಇಮಾಮ್-ಉಲ್-ಹಕ್, ಫಖರ್ ಜಮಾನ್, ಹ್ಯಾರಿ ಟೆಕ್ಟರ್, ಡೇವಿಡ್ ವಾರ್ನರ್, ಡಿ ಕಾಕ್, ಸ್ಟೀವ್ ಸ್ಮಿತ್ 2, 3, 5, 6, 7, 8 ಮತ್ತು 10 ನೇ ಸ್ಥಾನದಲ್ಲಿದ್ದಾರೆ.

ಸಿರಾಜ್ ನಾಲ್ಕನೇ ಸ್ಥಾನದಲ್ಲಿದ್ದಾರೆ. 10ನೇ ಸ್ಥಾನಕ್ಕೆ ಜಿಗಿದ ಕುಲದೀಪ್ ಯಾದವ್

ಬೌಲಿಂಗ್ ರ್ಯಾಂಕಿಂಗ್ನಲ್ಲಿ ಭಾರತದ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಮೊಹಮ್ಮದ್ ಸಿರಾಜ್ ಒಂದು ಸ್ಥಾನ ಜಿಗಿದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಕುಲದೀಪ್ ಯಾದವ್ ಟಾಪ್-10ರಲ್ಲಿ (10ನೇ ಸ್ಥಾನ) ಸ್ಥಾನ ಪಡೆದಿದ್ದಾರೆ. ಮಿಚೆಲ್ ಸ್ಟಾರ್ಕ್, ಮುಜೀಬ್, ರಶೀದ್, ಮ್ಯಾಟ್ ಹೆನ್ರಿ, ಬೌಲ್ಟ್, ಆಡಮ್ ಜಂಪಾ ಮತ್ತು ಶಾಹೀನ್ ಅಫ್ರಿದಿ 2, 3, 5, 6, 7, 8 ಮತ್ತು 9ನೇ ಸ್ಥಾನದಲ್ಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read