HomeIndiaಬಸ್ ನಿಂದ ತಲೆ ಹೊರಹಾಕಿದ ಮಹಿಳೆ; ವೇಗವಾಗಿ ಬಂದ ಮತ್ತೊಂದು ವಾಹನ ಡಿಕ್ಕಿ; ತಲೆ ನುಜ್ಜುಗುಜ್ಜಾಗಿ...

ಬಸ್ ನಿಂದ ತಲೆ ಹೊರಹಾಕಿದ ಮಹಿಳೆ; ವೇಗವಾಗಿ ಬಂದ ಮತ್ತೊಂದು ವಾಹನ ಡಿಕ್ಕಿ; ತಲೆ ನುಜ್ಜುಗುಜ್ಜಾಗಿ ಸ್ಥಳದಲ್ಲೇ ಸಾವು

ಅಲಿಪುರ: ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ತಲೆ, ಕೈ ಹೊರಗೆ ಹಾಕಿದರೆ ಎಂಥಹ ದುರಂತಕ್ಕೀಡಾಗಬೇಕಾಗುತ್ತದೆ ನೋಡಿ. ಮಹಿಳೆಯೊಬ್ಬರು ವಾಂತಿ ಬಂತೆಂದು ಬಸ್ ಕಿಡಕಿಯಿಂದ ತಲೆ ಹೊರಹೊರ ಹಾಕಿದಾಗ ವೇಗವಾಗಿ ಬಂದ ಮತ್ತೊಂದು ವಾಹನ ಮಹಿಳೆಯ ತಲೆಗೆ ಅಪ್ಪಳಿಸಿರುವ ಘಟನೆ ಅಲಿಪುರದಲ್ಲಿ ನಡೆದಿದೆ.

ಬಸ್ ಕಿಡಕಿಯಿಂದ ತಲೆ ಹೊರಹಾಕಿದ ವೇಳೆ ಇನ್ನೊಂದು ವಾಹನ ತಲೆಗೆ ಹೊಡೆದಿದ್ದು, ಮಹಿಳೆಯ ತಲೆ ನುಜ್ಜುಗುಜ್ಜಾಗಿದೆ. ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ತರ ಪ್ರದೇಶದ ಪ್ರತಾಪ್ ಗಢದಿದ ಬಂದಿದ್ದ ಬಾಬ್ಲಿ ಎಂಬ ಮಹಿಳೆ ಲುಧಿಯಾನಾಕ್ಕೆ ಬಸ್ ಏರಿದ್ದರು. ಇನ್ನೊಂದು ವಾಹನ ಬಸ್ ನ್ನು ಹಿಂದಿಕ್ಕಲು ಯತ್ನಿಸಿದ್ದ ವೇಳೆ ಮಹಿಳೆ ವಾಂತಿ ಬಂತೆಂದು ತಲೆ ಹೊರಹಾಕಿದ್ದಾರೆ. ಈ ವೇಳೆ ಈ ದುರಂತ ಸಂಭವಿಸಿದೆ. ಮಹಿಳೆಯ ತಲೆಗೆ ಅಪ್ಪಳಿಸಿದ ವಾಹನ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ.

ಅಪಘಾತ ಮಾಡಿದ ವಾಹನ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular