HomeIndiaBIG NEWS: ಅಮೇಜಾನ್ ಹಿರಿಯ ಮ್ಯಾನೇಜರ್ ಗೆ ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು

BIG NEWS: ಅಮೇಜಾನ್ ಹಿರಿಯ ಮ್ಯಾನೇಜರ್ ಗೆ ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು

ನವದೆಹಲಿ: ಅಮೇಜಾನ್ ಕಂಪನಿಯ ಹಿರಿಯ ಮ್ಯಾನೇಜರ್ ಓರ್ವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

36 ವರ್ಷದ ಹರಿಪ್ರೀತ್ ಗಿಲ್ ಕೊಲೆಯಾದ ದುರ್ದೈವಿ. ಸುಭಾಷ್ ವಿಹಾರ ಪ್ರದೇಶದಲ್ಲಿ ಐವರು ದುಷ್ಕರ್ಮಿಗಳ ತಂಡ ಹರಿಪ್ರೀತ್ ಹಾಗೂ ಸಂಬಂಧಿ ಗೋವಿಂದ್ ಸಿಂಗ್ ಮೇಲೆ ದಾಳಿ ನಡೆಸಿದ್ದು, ಹರಿಪ್ರೀತ್ ಗಿಲ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗುಂಡೇಟು ಹರಿಪ್ರೀತ್ ತಲೆಯ ಬಲಭಾಗದಿಂದ ಹೊಕ್ಕು ಇನ್ನೊಂದು ಭಾಗದಿಂದ ಹೊರಬಂದಿದೆ. ಘಟನೆಯಲ್ಲಿ ಗೋವಿಂದ್ ಸಿಂಗ್ ಕೂಡ ಗಾಯಗೊಂಡಿದ್ದಾರೆ. ಅಮೇಜಾನ್ ಮ್ಯಾನೇಜರ್ ಆಗಿದ್ದ ಹರಿಪ್ರೀತ್ ಅವರನ್ನು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಷ್ಟರಲ್ಲಿ ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳು ಗೋವಿಂದ್ ರನ್ನು ಜಯಪ್ರಕಾಸ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹರಿಪ್ರೀತ್ ಹಾಗೂ ಗೋವಿಂದ್ ಸಿಂಗ್ ಇಬ್ಬರೂ ಬೈಕ್ ನಲ್ಲಿ ತೆರಳುತ್ತಿದ್ದರು ಈ ವೇಳೆ ಸ್ಕೂಟರ್ ಹಾಗೂ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಈ ದಾಳಿ ನಡೆಸಿದ್ದಾರೆ. ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular