HomeKarnatakaViral Video: ಮೊಬೈಲ್ ನಲ್ಲಿ ಮಾತನಾಡುತ್ತಾ ರಸ್ತೆ ದಾಟಲು ಮುಂದಾದ ಬೈಕ್ ಸವಾರ; ಭೀಕರ ಅಪಘಾತದ...

Viral Video: ಮೊಬೈಲ್ ನಲ್ಲಿ ಮಾತನಾಡುತ್ತಾ ರಸ್ತೆ ದಾಟಲು ಮುಂದಾದ ಬೈಕ್ ಸವಾರ; ಭೀಕರ ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ವಾಹನ ಚಲಾಯಿಸುವಾಗ, ರಸ್ತೆ ದಾಟುವಾಗ ಎಚ್ಚರ ವಹಿಸಿದಷ್ಟೂ ಕಡಿಮೆಯೇ. ಡ್ರೈವಿಂಗ್ ಮಾಡುವಾಗ, ರಸ್ತೆ ದಾಟುವಾಗ ಮೊಬೈಲ್ ಬಳಸಬಾರದು ಎಂದು ಗೊತ್ತಿದ್ದರೂ ಅದೆಷ್ಟೋ ಬಾರಿ ಇಂತಹ ತಪ್ಪು ಮಾಡಿ ದುರಂತಗಳನ್ನು ಮೈಮೇಲೆ ಎಳೆದುಕೊಳ್ಳುತ್ತೇವೆ.

ಬೈಕ್ ಸವಾರರಿಬ್ಬರು ಮೊಬೈಲ್ ನಲ್ಲಿ ಮಾತನಾಡುತ್ತಾ ರಸ್ತೆ ದಾಟಲು ಮುಂದಾಗಿದ್ದಾರೆ ಈ ವೇಳೆ ವಾಹನ ಬರುತ್ತಿರುವುದನ್ನು ಗಮನಿಸಿ ಬೈಕ್ ನಿಲ್ಲಿಸಿದ್ದಾರೆ. ಇದೇ ವೇಳೆ ಮೊಬೈಲ್ ನಲ್ಲಿ ಮಾತನಾಡುತ್ತಾ ಹಿಂದಿನಿಂದ ಬಂದ ಮತ್ತೋರ್ವ ಬೈಕ್ ಸವಾರ ವಾಹನ ಬರುವುದನ್ನೂ ಗಮನಿಸದೇ ಏಕಾಏಕಿ ರಸ್ತೆ ದಾಟಲು ಮುಂದಾಗಿದ್ದಾನೆ. ಕ್ಷಣಾರ್ಧದಲ್ಲಿ ವೇಗವಾಗಿ ಬಂದ ಗೂಡ್ಸ್ ಲಾರಿಯೊಂದು ಬೈಕ್ ಸವಾರನ ಮೇಲೆಯೇ ಹರಿದು ಹೋಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೋಡ ನೋಡುತ್ತಿದ್ದಂತೆಯೇ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಮೈ ನಡುಗಿಸುವಂತಿದೆ.

 

 

For Latest News Updates, Join Our Whatsapp Community🚩
RELATED ARTICLES

Most Popular