HomeIndiaಲೈಂಗಿಕ ಕಿರುಕುಳದಿಂದ ಸೊಸೆ ರಕ್ಷಿಸಲು ಪತಿಯ ಕತ್ತು ಸೀಳಿದ ಮಹಿಳೆ

ಲೈಂಗಿಕ ಕಿರುಕುಳದಿಂದ ಸೊಸೆ ರಕ್ಷಿಸಲು ಪತಿಯ ಕತ್ತು ಸೀಳಿದ ಮಹಿಳೆ

ಉತ್ತರ ಪ್ರದೇಶದ ಬದೌನ್‌ನಲ್ಲಿ ತನ್ನ ಸೊಸೆಯನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಂದಿದ್ದಾಳೆ.

ಪತಿ ಮನೆಯ ಹೊರಗೆ ಮಂಚದ ಮೇಲೆ ಮಲಗಿದ್ದಾಗ ಕೊಡಲಿಯಿಂದ ಹೊಡೆದು ಕತ್ತು ಸೀಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಗಸ್ಟ್ 14 ರಂದು ತೇಜೇಂದರ್ ಸಿಂಗ್ ಎಂಬ 43 ವರ್ಷದ ವ್ಯಕ್ತಿ ಮಲಗಿದ್ದಾಗ ಈ ಘಟನೆ ನಡೆದಿದೆ. ಹತ್ಯೆಯ ತನಿಖೆ ಪ್ರಾರಂಭವಾದಾಗ, ಅನುಮಾನಾಸ್ಪದ ಸಂದರ್ಭಗಳಲ್ಲಿ ಅವನನ್ನು ಕೊಲೆ ಮಾಡಲಾಗಿದೆ ಎಂದು ಗೊತ್ತಾಗಿದೆ.

ಅಪರಿಚಿತ ವ್ಯಕ್ತಿಗಳು ಹತ್ಯೆಯ ಹಿಂದೆ ಇದ್ದಾರೆ ಎಂದು ಮೃತ ವ್ಯಕ್ತಿಯ ಕುಟುಂಬವು ಆರಂಭದಲ್ಲಿ ಹೇಳಿಕೊಂಡಿತ್ತು. ಆದರೆ, ನಂತರ ಪೊಲೀಸ್ ತನಿಖೆಯಿಂದ ಆತನ 40 ವರ್ಷದ ಪತ್ನಿ ಮಿಥಿಲೇಶ್ ದೇವಿ ಕತ್ತು ಕೊಯ್ದಿದ್ದಾಳೆ ಎಂದು ತಿಳಿದುಬಂದಿದೆ.

ಆಕೆ ಆರಂಭದಲ್ಲಿ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಳು. ಆದರೆ, ನಂತರ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ತನ್ನ ಪತಿ ಆಗಾಗ್ಗೆ ಹೊಡೆಯುತ್ತಿದ್ದ ಮತ್ತು ತಮ್ಮ 19 ವರ್ಷದ ಸೊಸೆಯನ್ನು ತನ್ನೊಂದಿಗೆ ಮಲಗಲು ಮನವೊಲಿಸಲು ಒತ್ತಾಯಿಸುತ್ತಿದ್ದ ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಆದರೆ, ಮಹಿಳೆ ತನ್ನ ಪತಿ ಸೊಸೆಯೊಂದಿಗೆ ಶಾಮೀಲಾಗಿದ್ದಾನೆ ಎಂದು ಶಂಕಿಸಿ ಗಂಡನನ್ನು ಕೊಂದಿದ್ದಾಳೆ. ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಬದೌನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ.ಒ.ಪಿ.ಸಿಂಗ್ ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular