HomeEntertainmentಕಟ್ಟು ಮಸ್ತಾದ ದೇಹ ಪ್ರದರ್ಶಿಸಿ ಫ್ಯಾನ್ಸ್ ಗೆ ಸಿಹಿ ಸುದ್ದಿ ಕೊಟ್ಟ ಸುದೀಪ್

ಕಟ್ಟು ಮಸ್ತಾದ ದೇಹ ಪ್ರದರ್ಶಿಸಿ ಫ್ಯಾನ್ಸ್ ಗೆ ಸಿಹಿ ಸುದ್ದಿ ಕೊಟ್ಟ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ‘ಪೈಲ್ವಾನ್’ ಚಿತ್ರದಲ್ಲಿ ಕಟ್ಟುಮಸ್ತಾದ ದೇಹ ಪ್ರದರ್ಶಿಸಿದ್ದ ಸುದೀಪ್ ಹೊಸ ಚಿತ್ರ ‘K 46’ ಚಿತ್ರದಲ್ಲಿಯೂ ಕಟ್ಟು ಮಸ್ತಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಅವರು ದೇಹ ದಂಡಿಸಿದ್ದಾರೆ.

ಸದೃಢ ಮೈಕಟ್ಟಿನೊಂದಿಗೆ ಕಾಣಿಸಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ತಮಿಳುನಾಡಿನ ಕಲೈಪುಲಿ ಎಸ್. ತನು ಅವರೊಂದಿಗೆ ಕಿಚ್ಚ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ‘K 46’ ಸಿನಿಮಾ ನಿರ್ಮಾಣವಾಗುತ್ತಿದ್ದು, ವಿಜಯ್ ಕಾರ್ತಿಕೇಯನ್ ನಿರ್ದೇಶನ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮಿಳುನಾಡಿನ ಮಹಾಬಲಿಪುರಂನಲ್ಲಿ ಚಿತ್ರೀಕರಣ ನಡೆದಿದ್ದು, ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿಸಿ ಬಂದಿರುವ ಸುದೀಪ್ ಮುಂದಿನ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 2 ರಂದು ಸುದೀಪ್ ಹುಟ್ಟುಹಬ್ಬದ ದಿನ ಚಿತ್ರದ ಟೈಟಲ್ ಮತ್ತು ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಸದೃಢ ಮೈಕಟ್ಟು ಪ್ರದರ್ಶಿಸಿದ ಫೋಟೋ ಹಂಚಿಕೊಂಡಿರುವ ಸುದೀಪ್ ತಾಲಿಮು ನನ್ನ ಹೊಸ ಹ್ಯಾಪಿ ಸ್ಪೇಸ್ ಆಗಿದೆ. ಈ ಒಂದು ದಿನಚರಿ ನನ್ನನ್ನು ಶಾಂತವಾಗಿಸುತ್ತದೆ. ಮತ್ತೆ ‘K 46’ ಕ್ಲೈಮಾಕ್ಸ್ ಫೈಟ್ ಸೀಕ್ವೆನ್ಸ್ ಇನ್ನೊಂದು ತಿಂಗಳು ಅಥವಾ ಅದಕ್ಕಿಂತ ಮೊದಲೇ ನಡೆಯಲಿದ್ದು, ನನ್ನ ವರ್ಕೌಟ್ ಸ್ಟೇಷನ್ ನಲ್ಲಿ ಮತ್ತಷ್ಟು ಸಾಧಿಸುವುದು ಇದೆ ಎಂದು ಸುದೀಪ್ ಪೋಸ್ಟ್ ಮಾಡಿದ್ದಾರೆ.

https://www.instagram.com/p/Cwb8QjfrWCm/

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular