ಬೆಂಗಳೂರು: ರಾತ್ರಿ ನಿಗದಿತ ಅವಧಿ ಮೀರಿ ನಡೆಸುತ್ತಿದ್ದ ಪಬ್ ಹಾಗೂ ಹೋಟೆಲ್ ಗಳ ಮೇಲೆ ಕೇಂದ್ರ ವಿಭಾಗ ಪೊಲೀಸರು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
ಬೆಂಗಳೂರಿನ ಬ್ರಿಗೇಡ್ ರಸ್ತೆ, ಎಂಜಿ ರಸ್ತೆ ಸೇರಿದಂತೆ ಕೇಂದ್ರ ವಿಭಾಗದ ವಾಣಿಜ್ಯ ಪ್ರದೇಶಗಳಲ್ಲಿ ರಾತ್ರಿ ವೇಳೆ ಅವಧಿ ಮೀರಿ ನಡೆಸುತ್ತಿದ್ದ ಪಬ್ ಗಳ ಮೇಲೆ ದಾಳಿ ಮಾಡಿದ್ದು, 20 ಪ್ರಕರಣ ದಾಖಲಿಸಲಾಗಿದೆ.
ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಲೈಂಗಿಕ ಅಲ್ಪಸಂಖ್ಯಾತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾನವ ಕಳ್ಳ ಸಾಗಣೆ ಆರೋಪದಡಿ ಹೋಟೆಲ್ ಒಂದರ ವ್ಯವಸ್ಥಾಪಕನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದು, ಅಕ್ರಮ ಬಂಧನದಲ್ಲಿದ್ದ ವಿದೇಶಿ ಮಹಿಳೆ ರಕ್ಷಣೆ ಮಾಡಲಾಗಿದೆ.
ಅವಧಿ ಮೀರಿ ಪಬ್ ನಡೆಸುತ್ತಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.