HomeKarnatakaವಿಡಿಯೋ ಚಿತ್ರೀಕರಣ ಮಾಡದಂತೆ ತಡೆದಿದ್ದಕ್ಕೆ ವಾರ್ಡನ್ ಮೇಲೆ ಹಲ್ಲೆ; ಯುವಕ ಅರೆಸ್ಟ್

ವಿಡಿಯೋ ಚಿತ್ರೀಕರಣ ಮಾಡದಂತೆ ತಡೆದಿದ್ದಕ್ಕೆ ವಾರ್ಡನ್ ಮೇಲೆ ಹಲ್ಲೆ; ಯುವಕ ಅರೆಸ್ಟ್

ರಾಯಚೂರು: ಹಾಸ್ಟೇಲ್ ವಾರ್ಡನ್ ಮೇಲೆ ಹಲ್ಲೆ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರಿನ ಈಚನಾಳದಲ್ಲಿ ನಡೆದಿದೆ.

ಈಚನಾಳ ಗ್ರಾಮದ ಮಲ್ಲರೆಡ್ಡೆಪ್ಪ ಬಂಧಿತ ಆರೋಪಿ. ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೇಲ್ ಪರಿಶೀಲನೆಗೆ ಬಂಧಿದ್ದ ಅಧಿಕಾರಿಗಳ ಜೊತೆ ಯುವಕ ಮಲ್ಲರೆಡ್ಡಪ್ಪ ಬಂದಿದ್ದ. ಹಾಸ್ಟೇಲ್ ವಿಡಿಯೋ ಚಿತ್ರೀಕರಣ ಮಾಡಲು ಮುಂದಾಗಿದ್ದ. ಈ ವೇಳೆ ವಾರ್ಡನ್, ವಿಡಿಯೋ ಮಾಡದಂತೆ ತಡೆದಿದ್ದಾರೆ. ಈ ವೇಳೆ ಯುವಕ ವಾರ್ಡನ್ ಮೇಲೆ ಹೊಡೆದಿದ್ದ. ಇದರಿಂದ ವಾರ್ಡನ್ ಗಾಯಗೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ಬಗ್ಗೆ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular