ಹುಡ್ಗೀರು ಇಷ್ಟ ಪಡುವ ಹುಡುಗ ಹೇಗಿರಬೇಕಂತ ಬಯಸ್ತಾರೆ ಗೊತ್ತಾ….?

‘ಅಕ್ಕ ನಿನ್ ಗಂಡ ಹೆಂಗಿರಬೇಕು..?’ ಈ ಹಾಡನ್ನು ಕೊಂಚ ಬದಲಿಸಿ, ನೀನು ಇಷ್ಟ ಪಡುವ ಹುಡುಗ ಹೇಗಿರಬೇಕೆಂದು ಯುವತಿಗೆ ಕೇಳಿದ್ರೆ ಏನ್ ಹೇಳಬಹುದು.

ಸಾಮಾನ್ಯವಾಗಿ ಸ್ನೇಹಿತ, ಸ್ನೇಹಿತೆಯರ ವಲಯದಲ್ಲಿ ಹೆಚ್ಚು ಚರ್ಚೆ ಆಗೋದೇ ಯಾರಿಗೇನು ಇಷ್ಟವಾಗುತ್ತೆ. ಹೇಗಿದ್ದರೆ ಇಂಪ್ರೆಸ್ ಮಾಡಬಹುದು ಎಂದು ಚರ್ಚೆಯಾಗುತ್ತದೆ.

ಯುವಕರು ಬ್ಯೂಟಿ ಬಗ್ಗೆ ತಲೆಕೆಡಿಸಿಕೊಂಡಷ್ಟು ಯುವತಿಯರ ಬುದ್ಧಿವಂತಿಕೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ, ಆದರೆ ಹುಡುಗಿಯರು ಹಾಗಲ್ಲ.

ಹೆಚ್ಚಿನ ಯುವತಿಯರಿಗೆ ಆಕರ್ಷಕ ವ್ಯಕ್ತಿತ್ವದ ಹುಡುಗನೆಂದರೆ ಬಲು ಇಷ್ಟ. ಸ್ಮಾರ್ಟ್ ಆಗಿದ್ದರೆ ಮಾತ್ರ ಸಾಲದು, ಬುದ್ಧಿವಂತನಾಗಿರಬೇಕು. ಆತನಿಗೆ ಹಾಸ್ಯಪ್ರಜ್ಞೆ ಇರಬೇಕು. ಇಂಪ್ರೆಸ್ ಮಾಡುವಂತಿರಬೇಕು. ತನ್ನ ಕಷ್ಟ, ಸುಖಗಳಲ್ಲಿ ಭಾಗಿಯಾಗಬೇಕು ಇಂತಹ ಹುಡುಗರನ್ನು ಕಂಡರೆ ಯುವತಿಯರಿಗೆ ಹೆಚ್ಚು ಇಷ್ಟವಾಗುತ್ತಂತೆ.

ಕಾಲ ಬದಲಾದಂತೆ ಟ್ರೆಂಡ್ ಕೂಡ ಬದಲಾಗಿದೆ. ಇಷ್ಟಪಡುವ ಗುಣ ಲಕ್ಷಣಗಳಿರುವ ಹುಡುಗನೇ ಸಂಗಾತಿಯಾಗಲಿ ಎಂದುಕೊಳ್ಳುತ್ತಾರೆ.

ಎಲ್ಲರೂ ಒಂದೇ ರೀತಿ ಇರಬೇಕೆಂದಿಲ್ಲ. ಹೆಚ್ಚಿನವರು ಇದೇ ಅಭಿಪ್ರಾಯವನ್ನು ಹೊಂದಿದ್ದರೂ, ಅವರವರ ಭಾವಕ್ಕೆ ತಕ್ಕಂತೆ ಭಾವನೆಗಳು ಬದಲಾಗುತ್ತವೆ ಎಂಬುದಂತೂ ನಿಜ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read