alex Certify ಭಾರತದ 4 ಶ್ರೀಮಂತ ನಗರಗಳಿವು; ಇಲ್ಲಿ ವಾಸವಿದ್ದಾರೆ ಕೋಟ್ಯಾಧಿಪತಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ 4 ಶ್ರೀಮಂತ ನಗರಗಳಿವು; ಇಲ್ಲಿ ವಾಸವಿದ್ದಾರೆ ಕೋಟ್ಯಾಧಿಪತಿಗಳು…!

ಭಾರತದಲ್ಲೂ ಅನೇಕ ಶ್ರೀಮಂತ ನಗರಗಳಿವೆ. ಸಾಕಷ್ಟು ಆಧುನಿಕ ಸೌಕರ್ಯಗಳಿರುವ ಈ ಸಿಟಿಗಳಲ್ಲಿ ದೇಶದ ಅನೇಕ ಸಿರಿವಂತರು ವಾಸವಿದ್ದಾರೆ. ಅಲ್ಲಿ ಜೀವನ ನಡೆಸುವುದು ತುಂಬಾ ದುಬಾರಿ. ಹಲವು ಕೋಟ್ಯಾಧಿಪತಿಗಳ ಮನೆಗಳೂ ಈ ನಗರಗಳಲ್ಲಿವೆ. ಸಮೀಕ್ಷೆಯೊಂದರಲ್ಲಿ ಜೀವನ ವೆಚ್ಚವು ಹೆಚ್ಚಾಗಿರುವ 227 ನಗರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸಮೀಕ್ಷೆಯ ಪ್ರಕಾರ ಭಾರತದ ಅತ್ಯಂತ ದುಬಾರಿ ನಗರಗಳೆಂದರೆ ಮುಂಬೈ (147ನೇ ಸ್ಥಾನ), ನವದೆಹಲಿ (169ನೇ ಸ್ಥಾನ), ಚೆನ್ನೈ (184ನೇ ಸ್ಥಾನ), ಬೆಂಗಳೂರು (189ನೇ ಸ್ಥಾನ), ಹೈದರಾಬಾದ್ (202ನೇ ಸ್ಥಾನ), ಕೋಲ್ಕತ್ತಾ (211ನೇ ಸ್ಥಾನ) ಮತ್ತು ಪುಣೆ (213ನೇ ಸ್ಥಾನ).

ಮುಂಬೈ

ಮಹಾರಾಷ್ಟ್ರದ ರಾಜಧಾನಿ ಮುಂಬೈಯನ್ನು ಬಾಲಿವುಡ್‌ನ ಕೇಂದ್ರ ಸ್ಥಾನವೆಂದೂ ಕರೆಯುತ್ತಾರೆ. ದೇಶದ ಖ್ಯಾತ ನಟರು ಇಲ್ಲಿ ವಾಸವಿದ್ದಾರೆ. ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯಿಂದ ಹಿಡಿದು ಅನೇಕ ದೊಡ್ಡ ಉದ್ಯಮಿಗಳು ಸಹ ಇಲ್ಲಿ ನೆಲೆಸಿದ್ದಾರೆ. ಮುಂಬೈನಲ್ಲಿ ಜೀವನಮಟ್ಟ ಬಹಳ ದುಬಾರಿ, ಆದರೂ ಎಲ್ಲ ವರ್ಗದ ಜನರು ವಾಸಿಸುತ್ತಾರೆ.

ದೆಹಲಿ

ದೇಶದ ರಾಜಧಾನಿ ದೆಹಲಿ. ದೆಹಲಿಯ ಇತಿಹಾಸ ಬಹಳ ಹಳೆಯದು. ಅನೇಕ ಮೊಘಲ್ ದೊರೆಗಳೂ ಇಲ್ಲಿಂದ ಆಳ್ವಿಕೆ ನಡೆಸಿದ್ದಾರೆ. ಮೆಟ್ರೋ ದೆಹಲಿಯ ಜನರ ಆಕರ್ಷಣೆಯ ಕೇಂದ್ರವಾಗಿದೆ. ಇದರೊಂದಿಗೆ ದೆಹಲಿ ವಿಶ್ವವಿದ್ಯಾಲಯ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಜೆಎನ್‌ಯು ಮುಂತಾದ ದೇಶದ ಹಲವು ದೊಡ್ಡ ವಿಶ್ವವಿದ್ಯಾಲಯಗಳೂ ಇಲ್ಲಿವೆ. ಇದರೊಂದಿಗೆ ಕೇಂದ್ರ ಸರಕಾರದ ಕಾರ್ಯ ನಡೆಯುವುದು ಕೂಡ ಇಲ್ಲಿಂದಲೇ. ದೆಹಲಿ ಕೂಡ ಅತ್ಯಂತ ದುಬಾರಿ ನಗರವಾಗಿದೆ.

ಬೆಂಗಳೂರು

ಬೆಂಗಳೂರು ಎಲ್ಲರೂ ಇಷ್ಟಪಡುವಂತಹ ಸುಂದರ ನಗರ. ರೆಸ್ಟೋರೆಂಟ್‌ಗಳು, ಸ್ಟ್ರೀಟ್ ಫುಡ್ ಕಾರ್ನರ್‌ಗಳು, ಕೆಫೆಗಳು, ಕಾಫಿ ರೋಸ್ಟರ್‌ಗಳು ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ. ಇತರ ನಗರಗಳಿಗೆ ಹೋಲಿಸಿದರೆ ಇಲ್ಲಿ ವಾಸ ಮಾಡುವುದು, ಊಟ-ಉಪಹಾರ ಕೊಂಚ ದುಬಾರಿ ಎನಿಸಬಹುದು.

ಚೆನ್ನೈ

ತಮಿಳುನಾಡಿನ ರಾಜಧಾನಿ ಚೆನ್ನೈ. ಭಾರತದ ನಾಲ್ಕು ಮಹಾನಗರಗಳಲ್ಲಿ ಚೆನ್ನೈ ಕೂಡ ಸೇರಿದೆ. ಚೆನ್ನೈಗೂ ತನ್ನದೇ ಆದ ಇತಿಹಾಸವಿದೆ. ಚೆನ್ನೈ ದಕ್ಷಿಣ-ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ದೇವಾಲಯಗಳು, ಬ್ರಿಟಿಷ್ ಕಾಲದ ವಸ್ತುಸಂಗ್ರಹಾಲಯಗಳು, ಸ್ಮಾರಕಗಳು ಇತ್ಯಾದಿ ಈ ನಗರದ ವಿಶೇಷತೆಗಳಲ್ಲಿ ಸೇರಿವೆ. ಚೆನ್ನೈ ಕೂಡ ವಾಸಿಸಲು ತುಂಬಾ ದುಬಾರಿ ನಗರವಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...