ಇಟ್ಟ ಕಲಶವನ್ನು ಕೊಂಚವೇ ಕದಲಿಸಿದರೆ ಅಲ್ಲಿಗೆ ಹಬ್ಬದ ಆಚರಣೆ ಮುಗಿಯಿತು ಅಂತ ಅರ್ಥ. ಆದರೆ ಕಲಶದ ಕೆಳಗೆ ಇಟ್ಟ ಅಕ್ಕಿ, ತೆಂಗಿನಕಾಯಿ, ಕಲಶದ ನೀರು, ವೀಳ್ಯದೆಲೆ ಇವೆಲ್ಲಾ ಎನು ಮಾಡಬೇಕು? ಹೇಗೆ ವಿಸರ್ಜನೆ ಮಾಡುವುದು ಅನ್ನೋ ಗೊಂದಲ ಇದೆಯೇ?
ಪೂಜೆಯನ್ನು ಶ್ರದ್ಧೆಯಿಂದ ಮಾಡಿದರಷ್ಟೇ ಸಾಲದು, ಪೂಜೆಯ ನಂತರ ಸರಿಯಾದ ರೀತಿಯಲ್ಲಿ ಪೂಜಾ ಸಲಕರಣೆಗಳ ವಿಸರ್ಜನೆ ಅಷ್ಟೇ ಮುಖ್ಯವಾಗುತ್ತದೆ.
ಕಲಶದ ಕೆಳಗೆ ಇಟ್ಟ ಅಕ್ಕಿ ಹಾಗೂ ತೆಂಗಿನಕಾಯಿಂದ ಸಿಹಿ ತಿನಿಸು ತಯಾರು ಮಾಡಿ.
ಕಳಶದ ನೀರನ್ನು ಮನೆಯ ಒಳಗೆ ಮಾವಿನ ಎಲೆಗಳನ್ನು ಅದ್ದಿ ಪ್ರೋಕ್ಷಣೆ ಮಾಡಿ. ಉಳಿದ ನೀರನ್ನು ಯಾರ ಪಾದಕ್ಕೂ ಸ್ಪರ್ಷವಾಗದ ಹಾಗೆ ಹಸಿರು ಗಿಡಕ್ಕೆ ಹಾಕಿ. ಯಾವುದೇ ಕಾರಣಕ್ಕೂ ಸಿಂಕ್ ನಲ್ಲಿ ಚೆಲ್ಲಬೇಡಿ.
ಇನ್ನೂ ಬಾಡಿದ ವೀಳ್ಯದೆಲೆಯನ್ನು ನಿಮ್ಮ ಮನೆಯ ತುಳಸಿ ಗಿಡಕ್ಕೆ ಹಾಕಿ.
ಸರಿಯಾದ ವಿಸರ್ಜನಾ ಕ್ರಮದಿಂದ ತಾಯಿಯ ಅನುಗ್ರಹಕ್ಕೆ ಪಾತ್ರರಾಗಿ.