HomeIndiaSHOCKING: ಬೈಕ್ ಹಿಂದಿನ ಚಕ್ರಕ್ಕೆ ಸಿಲುಕಿದ ದುಪಟ್ಟಾ ಕುತ್ತಿಗೆ ಸುತ್ತಿಕೊಂಡು ಮಹಿಳೆ ಸಾವು

SHOCKING: ಬೈಕ್ ಹಿಂದಿನ ಚಕ್ರಕ್ಕೆ ಸಿಲುಕಿದ ದುಪಟ್ಟಾ ಕುತ್ತಿಗೆ ಸುತ್ತಿಕೊಂಡು ಮಹಿಳೆ ಸಾವು

ಮುಂಬೈ: ವಸಾಯಿಯ ಕಾಂಡಿವಲಿ ಪ್ರದೇಶದ ತುಂಗರೇಶ್ವರದಲ್ಲಿ ಮಹಿಳೆಯೊಬ್ಬರು ದುಪಟ್ಟಾದಿಂದ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ.

ಪೂಜ್ಯ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಲು ಮಹಿಳೆ ತನ್ನ ಪತಿಯೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದರು. ಅವರ ದುಪಟ್ಟಾ(ಉದ್ದನೆಯ ಸ್ಕಾರ್ಫ್) ಬೈಕ್‌ನ ಚಕ್ರಕ್ಕೆ ಸಿಕ್ಕಿಹಾಕಿಕೊಂಡಿದ್ದರಿಂದ ಕತ್ತು ಬಿಗಿದು ಸಾವಿಗೆ ಕಾರಣವಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

27 ವರ್ಷದ ಪ್ರತಿಮಾ ಯಾದವ್ ಮೃತಪಟ್ಟ ಮಹಿಳೆ. ಅವರ ಅಕಾಲಿಕ ನಿಧನ ಕಾಂಡಿವಲಿ ಪಶ್ಚಿಮ ನಿವಾಸಿಗಳನ್ನು ದುಃಖದಲ್ಲಿ ಮುಳುಗಿಸಿದೆ. ಪ್ರತಿಮಾ ಇರಾನಿವಾಡಿ ಪ್ರದೇಶದ ಠಾಕೂರ್ ಚಾಲ್‌ನಲ್ಲಿ ವಾಸಿಸುತ್ತಿದ್ದರು.

ಮನೀಶ್ ಯಾದವ್ ಮತ್ತು ಪ್ರತಿಮಾ ಯಾದವ್ ದಂಪತಿ ಬುಲೆಟ್ ಮೋಟಾರ್‌ ಸೈಕಲ್‌ ನಲ್ಲಿ ಕಾಂಡಿವಲಿಯಿಂದ ವಸೈನಲ್ಲಿರುವ ತುಂಗರೇಶ್ವರ ಮಹಾದೇವ ದೇವಸ್ಥಾನಕ್ಕೆ ಹೋಗುವಾಗ ಘಟನೆ ನಡೆದಿದೆ.

ಮುಂಬೈ-ಅಹಮದಾಬಾದ್ ಹೆದ್ದಾರಿಯ ವಸಾಯಿ ಬಫಾನೆ ಬಳಿ ಪ್ರತಿಮಾ ಅವರ ಸ್ಕಾರ್ಫ್ ಬುಲೆಟ್ ಮೋಟಾರ್‌ ಸೈಕಲ್‌ನ ಹಿಂದಿನ ಚಕ್ರಕ್ಕೆ ಸಿಕ್ಕಿಹಾಕಿಕೊಂಡಿದ್ದರಿಂದ ದುರ್ಘಟನೆ ಸಂಭವಿಸಿದೆ. ಪ್ರತಿಮಾ ಕತ್ತಿಗೆ ಮತ್ತು ಚಕ್ರಕ್ಕೆ ದುಪಟ್ಟಾ ಸುತ್ತಿಕೊಂಡು ಬುಲೆಟ್‌ ನಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಆಕೆಯ ತಲೆಗೆ ಮಾರಣಾಂತಿಕ ಗಾಯಗಳಾಗಿವೆ. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular