HomeKarnatakaBIG NEWS: ಕಾಲೇಜು ಪ್ರಿನ್ಸಿಪಾಲ್ ಆತ್ಮಹತ್ಯೆಗೆ ಶರಣು; ಜಾನಪದ ಜಾತ್ರೆಗೆ ಆಮಂತ್ರಿಸಿದ್ದ ಪ್ರಾಂಶುಪಾಲರಿಂದ ದುಡುಕಿನ ನಿರ್ಧಾರ...!

BIG NEWS: ಕಾಲೇಜು ಪ್ರಿನ್ಸಿಪಾಲ್ ಆತ್ಮಹತ್ಯೆಗೆ ಶರಣು; ಜಾನಪದ ಜಾತ್ರೆಗೆ ಆಮಂತ್ರಿಸಿದ್ದ ಪ್ರಾಂಶುಪಾಲರಿಂದ ದುಡುಕಿನ ನಿರ್ಧಾರ…!

ಬಾಗಲಕೋಟೆ: ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದಿದೆ.

56 ವರ್ಷದ ನಾಗರಾಜ್ ಮುದಗಲ್ ಆತ್ಮಹತ್ಯೆಗೆ ಶರಣಾದ ಪ್ರಿನ್ಸಿಪಾಲ್. ಇಂದು ಕಾಲೇಜಿನಲ್ಲಿ ’ಜಾನಪದ ಜಾತ್ರೆ ಹೊನ್ನ ಸಂಭ್ರಮ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧೆಡೆ ತೆರಳಿ ಸ್ವತಃ ಪ್ರಾಂಶುಪಾಲರೇ ಎಲ್ಲರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಬಂದಿದ್ದರು. ಆದರೆ ಇದೀಗ ಪ್ರಾಂಶುಪಾಲರು ನೇಣಿಗೆ ಕೊರಳೊಡ್ಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾನಪದ ಜಾತ್ರೆಗಾಗಿ ಸಿದ್ಧತೆ ನಡೆಸಿದ್ದ ಕಾಲೇಜಿನಲ್ಲಿ ಸೂತಕದ ಛಾಯೆ ಆವರಿಸಿದೆ. ಏಕಾಏಕಿ ಪ್ರಾಂಶುಪಾಲರು ಆತ್ಮಹತ್ಯೆ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular