HomeLatest Newsಬೇಸಿಗೆಯಲ್ಲಿ ಮಾಡಿ ಸವಿಯಿರಿ ಮೊಸರಿನ ʼಐಸ್ ಕ್ರೀಂʼ

ಬೇಸಿಗೆಯಲ್ಲಿ ಮಾಡಿ ಸವಿಯಿರಿ ಮೊಸರಿನ ʼಐಸ್ ಕ್ರೀಂʼ

ಬೇಸಿಗೆಯಲ್ಲಿ ಐಸ್ ಕ್ರೀಂ, ತಂಪು ಪಾನೀಯ, ಮೊಸರು ಇದೆಲ್ಲ ಯಾರು ಬೇಡ ಹೇಳ್ತಾರೆ. ತಣ್ಣನೆಯ ಐಸ್ ಕ್ರೀಂ ಹಾಗೆ ಮೊಸರನ್ನು ಎಲ್ಲರೂ ಇಷ್ಟಪಡ್ತಾರೆ. ಮೊಸರಿನಲ್ಲೇ ಐಸ್ ಕ್ರೀಂ ಮಾಡಬಹುದು ನಿಮಗೆ ಗೊತ್ತಾ..? ಮೊಸರಿನ ಐಸ್ ಕ್ರೀಂ ತಿಂದು ಬಾಯಿ, ದೇಹವನ್ನು ತಂಪು ಮಾಡಿಕೊಳ್ಳಿ.

ಮೊಸರಿನ ಐಸ್ ಕ್ರೀಂ ಮಾಡಲು ಬೇಕಾಗುವ ಪದಾರ್ಥ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಧ ಕಪ್ ಮೊಸರು

ಕಾಲು ಕಪ್ ಸಕ್ಕರೆ

ಅರ್ಧ ಕಪ್ ಕ್ರೀಂ

2-3 ಹನಿ ವೆನಿಲಾ ಎಸೆನ್ಸ್

10-12 ಕತ್ತರಿಸಿದ ಗೋಡಂಬಿ

ಮೊಸರಿನ ಐಸ್ ಕ್ರೀಂ ಮಾಡುವ ವಿಧಾನ:

ಮೊದಲು ಒಂದು ಪಾತ್ರೆಗೆ ಮೊಸರು ಹಾಗೂ ಸಕ್ಕರೆಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಇದಕ್ಕೆ ಕ್ರೀಂ ಹಾಗೂ ವೆನಿಲಾ ಎಸೆನ್ಸ್ ಹಾಕಿ ಮತ್ತೆ ಬ್ಲಂಡರ್ ಮಾಡಿ. ಮಿಶ್ರಣ ಸ್ವಲ್ಪ ಗಟ್ಟಿಯಾದ ಮೇಲೆ ಇದಕ್ಕೆ ಗೋಡಂಬಿ ಹಾಕಿ ಗಾಳಿಯಾಡದ ಡಬ್ಬದಲ್ಲಿ ಮಿಶ್ರಣವನ್ನು ಹಾಕಿ ಫ್ರೀಜರ್ ನಲ್ಲಿಡಿ. ಸುಮಾರು 5-6 ಗಂಟೆಯವರೆಗೆ ಫ್ರೀಜರ್ ನಲ್ಲಿಡಿ. ಗಟ್ಟಿಯಿರುವಾಗಲೆ ರುಚಿರುಚಿ ಐಸ್ ಕ್ರೀಂ ತಿನ್ನಿ.

ನಿಮಗಿಷ್ಟವಾಗುವ ಬೇರೆ ಪದಾರ್ಥಗಳನ್ನು ಕೂಡ ಬಳಸಬಹುದು. ಸೇಬು, ಪಪ್ಪಾಯ, ಅನಾನಸ್ ಹೀಗೆ ನಿಮಗಿಷ್ಟವಾಗುವ ಫ್ಲೇವರ್ ನಲ್ಲಿ ನೀವು ಮೊಸರಿನ ಐಸ್ ಕ್ರೀಂ ಮಾಡಬಹುದು.

For Latest News Updates, Join Our Whatsapp Community🚩
RELATED ARTICLES

Most Popular