HomeKarnataka50-60 ಕೋಟಿ ಇದ್ದ ಆಸ್ತಿ 1400 ಕೋಟಿ ಮಾಡೋ ಕನಸು; ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ವಾಗ್ದಾಳಿ...

50-60 ಕೋಟಿ ಇದ್ದ ಆಸ್ತಿ 1400 ಕೋಟಿ ಮಾಡೋ ಕನಸು; ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ HDK

ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಹೋದರ ಡಿ.ಕೆ.ಸುರೇಶ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಹೆಚ್.ಡಿ.ಕುಮರಸ್ವಾಮಿ, ಮೇಕೆದಾಟು ಯೋಜನೆ ಅವರ ಕನಸಿನ ಕೂಸಂತೆ. 50-60 ಕೋಟಿ ಇದ್ದ ಆಸ್ತಿಯನ್ನು 1400 ಕೋಟಿ ಮಾಡುವ ಕನಸು ಅವರದ್ದು ಎಂದು ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡನೇ ಬಾರಿ ಸಿಎಂ, ಹಣಕಾಸು ಸಚಿವನಾಗಿ ನಾನು ಮೇಕೆದಾಟು ಯೋಜನೆ ತಂದೆ. 450 ಕೋಟಿ ವೆಚ್ಚದಲ್ಲಿ ನೀರು ತರುವ ಯೋಜನೆ ತಂದಿದ್ದು ನಾನು. ಇವರು ಮೇಕೆದಾಟು ಯೋಜನೆ… ಜನರಿಗೆ ಕುಡಿಯುವ ನೀರು ಕೊಡುತ್ತೇವೆ, ಕೃಷಿಗೆ ನೀರು ಹರಿಸುತ್ತೇವೆ ಎಂದು ಪಾದಯಾತ್ರೆ ನಾಟಕ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

 

For Latest News Updates, Join Our Whatsapp Community🚩
RELATED ARTICLES

Most Popular