ಬೆಂಗಳೂರು : 9, 10 ನೇ ತರಗತಿ ಮಕ್ಕಳಿಗೆ ಡಿಸಿಎಂ ಡಿಕೆ ಶಿವಕುಮಾರ್ ( DK Shivakumar) ಬಾಳೆಹಣ್ಣು, ಚಿಕ್ಕಿ ವಿತರಿಸಿದರು.
ಬೆಂಗಳೂರಿನ ಶಾಲೆಯೊಂದಕ್ಕೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು 9 ಹಾಗೂ 10 ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಹಂಚಿದರು. ಈ ವೇಳೆ ಡಿಸಿಎಂಗೆ ಸಚಿವ ರಾಮಲಿಂಗಾರೆಡ್ಡಿ ಸಾಥ್ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿಟಿ ರೌಂಡ್ಸ್ ಕೈಗೊಂಡಿದ್ದು, ಈಜಿಪುರ ಮೇಲ್ಸೇತುವೆ ಸ್ಥಿತಿ ಗತಿ ವೀಕ್ಷಣೆ ಮಾಡಿದ್ದಾರೆ. ಬನಶಂಕರಿ ಬಸ್ ನಿಲ್ದಾಣ, ಗಾಂಧಿ ಬಜಾರ್ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ.