HomeEntertainment'ಟಗರು ಪಲ್ಯ' ಚಿತ್ರದ ಟೈಟಲ್ ಟ್ರಾಕ್ ರಿಲೀಸ್

‘ಟಗರು ಪಲ್ಯ’ ಚಿತ್ರದ ಟೈಟಲ್ ಟ್ರಾಕ್ ರಿಲೀಸ್

tagaru-palya-kannada-movie

ನಿನ್ನೆ  ನಟ ನಾಗಭೂಷಣ್ ಅವರ ಹುಟ್ಟು ಹಬ್ಬದ ಪ್ರಯುಕ್ತ  ‘ಟಗರು ಪಲ್ಯ’ ಚಿತ್ರದ  ಟೈಟಲ್ ಟ್ರ್ಯಾಕ್ ಒಂದನ್ನು ಡಾಲಿ ಪಿಚ್ಚರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಗಾನಪ್ರಿಯರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು ಸಾಕಷ್ಟು ವೀಕ್ಷಣೆ ಗಳಿಸಿದೆ.

ವಿಜಯ್ ಪ್ರಕಾಶ್ ಹಾಗೂ ಜೋಗಿಲ ಸಿದ್ದರಾಜು ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದು, ಡಾಲಿ ಧನಂಜಯ್ ಸಾಹಿತ್ಯವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಮೇಶ್ ಕೆ ಕೃಪ ರಚಿಸಿ ನಿರ್ದೇಶಿಸಿರುವ ಈ ಚಿತ್ರವನ್ನು ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದು, ನಾಗಭೂಷಣ್ ಹಾಗೂ ಪ್ರೇಮ್ ಪುತ್ರಿ ಅಮೃತಾ ಪ್ರಮುಖ ಪಾತ್ರದಲ್ಲಿ  ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ರಂಗಾಯಣ ರಘು, ತಾರಾ, ಹುಲಿ ಕಾರ್ತಿಕ್, ಯಶಶಿವಕುಮಾರ್ ಪೂರ್ಣಚಂದ್ರ, ನಿರಂಜನ್ ಸೇರಿದಂತೆ ಸಾಕಷ್ಟು ಕಲಾವಿದರ ದಂಡೇ  ಈ ಸಿನಿಮಾದಲ್ಲಿದೆ.

For Latest News Updates, Join Our Whatsapp Community🚩
RELATED ARTICLES

Most Popular