HomeKarnatakaರಾಜ್ಯದ ಶಾಲಾ ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್ : `ಶುಚಿ ಯೋಜನೆ’ಗೆ ಮರುಚಾಲನೆ

ರಾಜ್ಯದ ಶಾಲಾ ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್ : `ಶುಚಿ ಯೋಜನೆ’ಗೆ ಮರುಚಾಲನೆ

ಬೆಂಗಳೂರು : ರಾಜ್ಯ ಸರ್ಕಾರವು ವಿದ್ಯಾರ್ಥಿನಿಯರಿಗೆ ಸಿಹಿಸುದ್ದಿ ನೀಡಿದ್ದು,  2020 – 21ರ ಬಳಿಕ ಸ್ಥಗಿತಗೊಂಡಿದ್ದ ‘ಶುಚಿ’ ಯೋಜನೆಗೆ ಮತ್ತೆ ಚಾಲನೆ ನೀಡಿದ್ದು, ಈ ಯೋಜನೆ ಅಡಿ ಸರ್ಕಾರಿ, ಅನುದಾನಿತ ಶಾಲೆಗಳ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ ಕಿನ್ ವಿತರಣೆ ಮಾಡಲಾಗುತ್ತದೆ.

ಸ್ಯಾನಿಟರಿ ನ್ಯಾಪ್ ಕಿನ್ ವಿತರಣೆಗಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆಗಳನ್ನು ಪುನರಾರಂಭಿಸಲಾಗಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ರಾಜ್ಯದ 17.99 ಲಕ್ಷ ವಿದ್ಯಾರ್ಥಿನಿಯರು ‘ಶುಚಿ’ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಯೋಜನೆ ಅಡಿ ಪ್ರತಿ ತಿಂಗಳು 10 ನ್ಯಾಪ್ ಕಿನ್ ಗಳನ್ನು ಹೊಂದಿರುವ ಒಂದು ಯೂನಿಟ್ ಅನ್ನು 11 ತಿಂಗಳುಗಳ ಕಾಲ ವಿದ್ಯಾರ್ಥಿನಿಯರಿಗೆ ಒದಗಿಸಲಾಗುತ್ತಿದ್ದು, ಆದರೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ಮೂರು ತಿಂಗಳು ಕಳೆದಿದೆ. ಹೀಗಾಗಿ ಉಳಿದಿರುವ ಎಂಟು ತಿಂಗಳಿಗೆ ಪ್ರತಿ ತಿಂಗಳು ತಲಾ ಹತ್ತು ನ್ಯಾಪ್ ಕಿನ್ ಹೊಂದಿರುವ ಒಟ್ಟು ಎಂಟು ಯೂನಿಟ್ ಗಳನ್ನು ಪೂರೈಸಲಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular