HomeKarnatakaಬಸ್ ನಿಲ್ದಾಣದಲ್ಲಿ ಯತ್ನಾಳ್ ಗಿಳಿ ಶಾಸ್ತ್ರ ಹೇಳಲಿ; ಸಚಿವ ಮಧು ಬಂಗಾರಪ್ಪ ವ್ಯಂಗ್ಯ

ಬಸ್ ನಿಲ್ದಾಣದಲ್ಲಿ ಯತ್ನಾಳ್ ಗಿಳಿ ಶಾಸ್ತ್ರ ಹೇಳಲಿ; ಸಚಿವ ಮಧು ಬಂಗಾರಪ್ಪ ವ್ಯಂಗ್ಯ

ಕಾಂಗ್ರೆಸ್ ಸರ್ಕಾರ ಇನ್ನು ಆರು ತಿಂಗಳೊಳಗಾಗಿ ಪತನಗೊಳ್ಳಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು, ಇದಕ್ಕೆ ತಿರುಗೇಟು ನೀಡಿರುವ ಸಚಿವ ಮಧು ಬಂಗಾರಪ್ಪ, ಬಸ್ ನಿಲ್ದಾಣದಲ್ಲಿ ಯತ್ನಾಳ್ ಗಿಳಿ ಶಾಸ್ತ್ರ ಹೇಳಲಿ ಎಂದು ವ್ಯಂಗ್ಯವಾಡಿದ್ದಾರೆ.

ಮಂಗಳವಾರದಂದು ಶಿವಮೊಗ್ಗದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವ ಮುನ್ನ ಅದಕ್ಕೆ ಸೂಕ್ತ ದಾಖಲೆಗಳಿರಬೇಕು. ಸುಮ್ಮನೆ ಆರೋಪ ಮಾಡಬಾರದು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ನೀಡಿದ ಹೇಳಿಕೆ ಕುರಿತಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಉಪೇಂದ್ರ ಅವರು ನನ್ನ ಸ್ನೇಹಿತರಾಗಿದ್ದು, ಆದರೆ ಅವರು ಆ ರೀತಿ ಮಾತನಾಡಬಾರದಾಗಿತ್ತು. ಯಾರೇ ಈ ರೀತಿ ಮಾಡಿದರೆ ಅದು ತಪ್ಪು ಎಂದರು.

For Latest News Updates, Join Our Whatsapp Community🚩
RELATED ARTICLES

Most Popular