ನವದೆಹಲಿ : 77 ನೇ ಸ್ವಾತಂತ್ರ್ಯೋತ್ಸವಕ್ಕೆ ಕೆಂಪುಕೋಟೆ ಸಜ್ಜಾಗಿದ್ದು, ದೇಶದ 1800 ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಸಮಾರಂಭ ಪ್ರತಿ ವರ್ಷದಂತೆ ಈ ಸಲವೂ ಮಂಗಳವಾರ ದಿಲ್ಲಿಯ ಕೆಂಪುಕೋಟೆಯಲ್ಲಿ ನಡೆಯಲಿದ್ದು, ಸಕಲ ಸಿದ್ದತೆ ನಡೆಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿ ಸಾಂಪ್ರದಾಯಿಕ ಭಾಷಣ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಯ ‘ಜನ ಭಾಗೀದಾರಿಕೆ’ ತತ್ವದಂತೆ ಅನೇಕ ಕನ್ನಡಿಗರೂ ಸೇರಿ ಸುಮಾರು 1,800 ‘ವಿಶೇಷ ಅತಿಥಿಗಳು’ ಕೆಂಪುಕೋಟೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಹೌದು, ದೇಶದ 1800 ಮಂದಿ ಜನಸಾಮಾನ್ಯರಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ಉತ್ತಮ ಗ್ರಾಮಗಳ 400 ಮಂದಿ ಸರಪಂಚರು, ರೈತ ಉತ್ಪಾದಕ ಸಂಸ್ಥೆಗಳಲ್ಲಿರುವ 250 ರೈತರು, ಪಿಎಂ- ಕಿಸಾನ್ ಯೋಜನೆಯ 50 ಫಲಾನುಭವಿ, ಪಿಎಂ- ಕೌಶಲ ವಿಕಾಸ್ ಯೋಜನೆಯ 50 ಜನರು, , 50 ದಾದಿಯರು
50 ಬೆಸ್ತರು, ವಿವಿಧ ಯೋಜನೆಗಳ 50 ಕಾರ್ಮಿಕರು, ಹೊಸ ಸಂಸತ್ ನಿರ್ಮಾಣ ಮಾಡಿದ 50 ಕೆಲಸಗಾರರು, 50 ಖಾದಿ ಕಾರಿಕರು, 50 ಶಿಕ್ಷಕರಿಗೆ ಆಹ್ವಾನ ನೀಡಲಾಗಿದೆ. ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ 75 ಜೋಡಿಗಳಿಗೆ ಕೂಡ ಅವರವರ ಸಾಂಪ್ರದಾಯಿಕ ಉಡುಗೊರೆಯಲ್ಲಿ ಸಮಾರಂಭ ವೀಕ್ಷಿಸಲು ಆಹ್ವಾನಿಸಲಾಗಿದೆ.