HomeAgricultureಭತ್ತ ನಾಟಿಗೆ ಸಜ್ಜಾಗಿದ್ದ ರೈತರಿಗೆ ಗುಡ್ ನ್ಯೂಸ್ : ಭದ್ರಾ ಜಲಾಶಯದಿಂದ ನಾಲೆಗೆ 100 ದಿನ...

ಭತ್ತ ನಾಟಿಗೆ ಸಜ್ಜಾಗಿದ್ದ ರೈತರಿಗೆ ಗುಡ್ ನ್ಯೂಸ್ : ಭದ್ರಾ ಜಲಾಶಯದಿಂದ ನಾಲೆಗೆ 100 ದಿನ ನೀರು ಹರಿಸಲು ತೀರ್ಮಾನ

ಶಿವಮೊಗ್ಗ : ಭತ್ತ ನಾಟಿಗೆ ಸಜ್ಜಾಗಿದ್ದ ರೈತರಿಗೆ ಸಿಹಿಸುದ್ದಿ, ಇಂದಿನಿಂದ 100 ದಿನ ಭದ್ರಾ ಕಾಲುವೆಗೆ ನೀರು ಬಿಡುಗಡೆ ಮಾಡಲು ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯದ ಐಬಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆದಿದ್ದು, ನೀರು ಹರಿಸಲು ತೀರ್ಮಾನಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಂಗಾರು ಮಳೆ ಕೈಕೊಟ್ಟ ಕಾರಣ ರೈತರು ಕಂಗಾಲಾಗಿದ್ದರು. ಭತ್ತ ನಾಟಿಗೆ ಸಜ್ಜಾಗಿದ್ದ ರೈತರಿಗೆ ಸಲಹಾ ಸಮಿತಿ ಸಂತಸದ ಸುದ್ದಿ ಕೊಟ್ಟಿದೆ. ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ರೈತರ ಅನುಕೂಲಕ್ಕಾಗಿ ನೀರು ಬಿಡುಗಡೆ ಮಾಡಲಾಗುವುದು.

ಇಂದಿನಿಂದ 100 ದಿನ ಭದ್ರಾ ಡ್ಯಾಮ್ ನಿಂದ ನೀರು ಬಿಡುಗಡೆ ಮಾಡಲಾಗುವುದು. ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ, ಅಧೀಕ್ಷಕ ಇಂಜಿನಿಯರ್ ಎನ್. ಸುಜಾತ ನೀರು ಬಿಡುಗಡೆಗೆ ಕ್ರಮಕೈಗೊಂಡಿದ್ದಾರೆ. ಕಾಲುವೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ದರು. ದಾವಣಗೆರೆ ಜಿಲ್ಲೆಯ ಬಹುತೇಕ ಕಡೆ ಅನ್ನದಾತರು ಪ್ರತಿಭಟನೆ ನಡೆಸಿದ್ದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular