alex Certify ಬಿ.ಕೆ. ಶಿವರಾಂ ನಿವಾಸದ ಬಳಿ ಸ್ಪಂದನಾ ಮೃತದೇಹ ಅಂತಿಮ ದರ್ಶನಕ್ಕೆ ವ್ಯವಸ್ಥೆ: ಸಾಂತ್ವನ ಹೇಳಿದ ಶಿವಣ್ಣ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿ.ಕೆ. ಶಿವರಾಂ ನಿವಾಸದ ಬಳಿ ಸ್ಪಂದನಾ ಮೃತದೇಹ ಅಂತಿಮ ದರ್ಶನಕ್ಕೆ ವ್ಯವಸ್ಥೆ: ಸಾಂತ್ವನ ಹೇಳಿದ ಶಿವಣ್ಣ ದಂಪತಿ

ಬೆಂಗಳೂರು: ಮೂರು ದಿನಗಳ ಹಿಂದೆ ಥೈಲ್ಯಾಂಡ್ ನಲ್ಲಿ ಮೃತಪಟ್ಟ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಮೃತದೇಹವನ್ನು ರಾತ್ರಿ ಒಂದು ಗಂಟೆಗೆ ಬೆಂಗಳೂರಿಗೆ ತರಲಾಗಿದೆ.

1:30 ಸುಮಾರಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ಅವರ ತಂದೆ ಬಿ.ಕೆ. ಶಿವರಾಂ ನಿವಾಸಕ್ಕೆ ಮೃತದೇಹ ತರಲಾಗಿದ್ದು, ಕುಟುಂಬದವರು ಪೂಜೆ ನೆರವೇರಿಸಿದ್ದಾರೆ. ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕುಟುಂಬದವರು, ಸಂಬಂಧಿಕರು, ಆಪ್ತರು, ಬಿ.ಕೆ. ಶಿವರಾಂ ನಿವಾಸಕ್ಕೆ ಆಗಮಿಸಿ, ಪೂಜೆ ಸಲ್ಲಿಸಿ ದರ್ಶನ ಪಡೆಯಲು ಮುಂದಾಗಿದ್ದಾರೆ. ನಟ ಶಿವರಾಜ್ ಕುಮಾರ್ ದಂಪತಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ವಿಜಯ್ ರಾಘವೇಂದ್ರ, ಶ್ರೀ ಮುರುಳಿ ಸೇರಿದಂತೆ ಕುಟುಂಬದವರು ಪೂಜಾ ಕಾರ್ಯ ನೆರವೇರಿಸಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...