HomeKarnatakaBIGG NEWS : ಮುಂದಿನ ಎರಡು ವರ್ಷ `PSI’ ನೇಮಕಾತಿ ಇಲ್ಲ : ಗೃಹ ಸಚಿವ...

BIGG NEWS : ಮುಂದಿನ ಎರಡು ವರ್ಷ `PSI’ ನೇಮಕಾತಿ ಇಲ್ಲ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಮಾಗಡಿ : ಪಿಎಸ್ ಐ ನೇಮಕಾತಿ ಹಗರಣ ಮುಗಿಯುವವರೆಗೂ ಮುಂದಿನ ಎರಡು ವರ್ಷ ಪಿಎಸ್ ಐಗಳ ನೇಮಕಾತಿ ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಗಮನಹರಿಸದಿದ್ದ ಕಾರಣಕ್ಕೆ ಪಿಎಸ್ ಐ ಹಗರಣ ನಡೆದಿದೆ. ಎಡಿಜಿಪಿ ನೇತೃತ್ವದಲ್ಲಿ ಹಗರಣದ ತನಿಖೆ ನಡೆಯುತ್ತಿದೆ. ಈ ಕಗ್ಗಂಟು ಮುಗಿಯುವವರೆಗೆ ಹೊಸ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ನಿಗದಿತ ವೇಳೆಯಲ್ಲಿ ಅರ್ಹರಿಗೆ ಬಡ್ತಿ ನೀಡಲು ಕಾನೂನಿನಲ್ಲಿ ಅವಕಾಶ ಇದ್ದು, ಅರ್ಹರೆಲ್ಲರಿಗೂ ಬಡ್ತಿ ನಿಡಲಾಗುವುದು ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಘವೇಂದ್ರ ಔರಾದ್ಕರ್ ವರದಿಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಪೊಲೀಸರು ಸಂಕಷ್ಟದಲ್ಲಿದ್ದಾರೆ. ಅವರಿಗೆ ವೇತನ ಹೆಚ್ಚಳ, ಭತ್ಯೆ ಪರಿಷ್ಕರಣೆ, ಮನೆಗಳ ನವೀಕರಣ, ಸಮವಸ್ತ್ರ ನೀಡುವುದೂ ಸೇರಿದಂತೆ ಹಲವು ಶಿಫಾರಸ್ಸುಗಳನ್ನು ಔರಾದ್ಕರ್ ಸಮಿತಿ ಮಾಡಿದ್ದು, ಇವುಗಳ ಸಂಪೂರ್ಣ ಅನುಷ್ಠಾನಕ್ಕೆ ನಾವು ಬದ್ಧ ಎಂದು ಪರಮೇಶ್ವರ್ ವಾಗ್ದಾನ ಮಾಡಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular