HomeAutoಡೆಲಿವರಿ ಬಾಯ್ ವೇಷದಲ್ಲಿ ಮನೆ ಮನೆಗೆ ತೆರಳಿ ಫುಡ್ ಡೆಲಿವರಿ ಮಾಡಿದ Zomato CEO

ಡೆಲಿವರಿ ಬಾಯ್ ವೇಷದಲ್ಲಿ ಮನೆ ಮನೆಗೆ ತೆರಳಿ ಫುಡ್ ಡೆಲಿವರಿ ಮಾಡಿದ Zomato CEO

ಹೈದರಾಬಾದ್: ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್, ಫುಡ್ ಡೆಲಿವರಿ ಬಾಯ್ ಆಗಿ ಮನೆ ಮನೆಗೆ ತೆರಳಿ ಫುಡ್ ವಿತರಣೆ ಮಾಡಿದ್ದಾರೆ. ಈ ಮೂಲಕ ವಿಶೇಷ ರೀತಿಯಲ್ಲಿ ಫ್ರೆಂಡ್ ಶಿಪ್ ಡೇ ಆಚರಿಸಿದ್ದಾರೆ.

ಜೊಮ್ಯಾಟೊ ರೆಗ್ಯುಲರ್ ಡೆಲಿವರಿ ಬಾಯ್ ನಂತೆ ಕೆಂಪು ಟಿ-ಶರ್ಟ್ ದರಿಸಿ, ಬೈಕ್ ನಲ್ಲಿ ಮನೆ ಮನೆಗೆ ತೆರಳಿ ಗ್ರಾಹಕರಿಗೆ ಫುಡ್ ಡೆಲಿವರಿ ಮಾಡಿದ್ದಾರೆ. ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ, ಕೈಯಲ್ಲಿ ಫ್ರೆಂಡ್ ಶಿಪ್ ಬ್ಯಾಂಡ್ ಗಳನ್ನು ಇಟ್ಟುಕೊಂಡು ಮನೆ ಮನೆಗೆ ತೆರಳಿ, ಆಹಾರದ ಪೊಟ್ಟಣಗಳನ್ನು ತಲುಪಿಸಿದ್ದಾರೆ. ಈ ಬಗ್ಗೆ ದೀಪಿಂದರ್ ಗೋಯಲ್ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲ ಗ್ರಾಹಕರು, ರೆಸ್ಟೋರೆಂಟ್ ಪಾಲುದಾರರು, ಡೆಲಿವರಿ ಬಾಯ್ಸ್ ಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಲು ತೆರಳುತ್ತಿದ್ದೇನೆ. ಇದು ವಿಶೇಷ ಭಾನುವಾರ ಎಂದು ಬರೆದುಕೊಂಡಿದ್ದಾರೆ. ಜೊಮ್ಯಾಟೊ ಸಿಇಒ ಡೆಲಿವರಿ ಬಾಯ್ ನಂತೆ ತೆರಳಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular