ಕಾರವಾರ: ‘ಪಂಜುರ್ಲಿ’ ಎಂದು ಪೂಜೆ ಮಾಡುತ್ತಿದ್ದ ಕಾಡುಹಂದಿಯನ್ನು ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ಹತ್ಯೆ ಮಾಡಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಂಡಿಯಾ ಗ್ರಾಮದಲ್ಲಿ ನಡೆದಿದೆ.
ಕಾಡುಹಂದಿ ಊರ ಜನರು ನೀಡುತ್ತಿದ್ದ ಆಹಾರವನ್ನು ಸೇವಿಸುತ್ತ ಇಡೀ ಗ್ರಾಮದಲ್ಲಿ ಜನರ ಪ್ರೀತಿಗೆ ಪಾತ್ರವಾಗಿತ್ತು. ಈ ಹಂದಿಯನ್ನು ಜನರು ಪಂಜುರ್ಲಿ ಎಂದೇ ಕರೆಯುತ್ತಿದ್ದರು. ಪಂಜುರ್ಲಿ ಎಂದು ದೈವದ ಸ್ಥಾನ ಕೊಟ್ಟು ಪೂಜಿಸುತ್ತಿದ್ದರು.
‘ಕಾಂತಾರಾ’ ಸಿನಿಮಾ ನಂತರ ಈ ಕಾಡುಹಂದಿಯನ್ನು ‘ಪಂಜುರ್ಲಿ’ ಎಂದು ಜನರು ಕರೆಯುತ್ತಿದ್ದರು. ನಿನ್ನೆ ತಡ ರಾತ್ರಿ ಯಾರೋ ದುಷ್ಕರ್ಮಿಗಳು ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ಪಂಜುರ್ಲಿ ಕಾಡಹಂದಿಯನ್ನು ಹತ್ಯೆ ಮಾಡಿದ್ದಾರೆ.
ಇದರಿಂದ ಬೇಸರಗೊಂಡಿರುವ ಗ್ರಾಮಸ್ಥರು ಕಾರವಾರ ಅರಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.