ಬೆಂಗಳೂರು : ತಾಂತ್ರಿಕವಾಗಿ 30 ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಲಾಗಿದೆ, ಬಹುತೇಕರು ರಿಪೋರ್ಟ್ ಮಾಡಿಕೊಂಡಿದ್ದ ಕೆಲವು ಕಡೆ ಆಗಿಲ್ಲ, ಸೋವಾರವಾರದಿಂದ ವರ್ಗಾವಣೆ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಇನ್ಸ್ಪೆಕ್ಟರ್ ವರ್ಗಾವಣೆ ತಡೆ ಹಿಡಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ತಾಂತ್ರಿಕವಾಗಿ 250 ಜನರನ್ನ ವರ್ಗಾವಣೆ ಮಾಡಿದ್ದೇವು. ಬಹುತೇಕ ಎಲ್ಲರೂ ರಿಪೋರ್ಟ್ ಮಾಡಿಕೊಂಡಿದ್ದಾರೆ, ಕೆಲವು ಕಡೆ ಆಗಿಲ್ಲ. ಅದನ್ನು ಸರಿಪಡಿಸಿಕೊಂಡು ಮಾಡುತ್ತೇವೆ. ಸೋಮವಾರದೊಳಗೆ ಟ್ರಾನ್ಸ್ಫರ್ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.