HomeKarnatakaBIG NEWS: ಮಹಿಳಾ ಅಧಿಕಾರಿ ಮೇಲೆಯೇ ಪತಿಯಿಂದ ಹಲ್ಲೆ; ಕಚೇರಿಗೆ ನುಗ್ಗಿ ಕೃತ್ಯ

BIG NEWS: ಮಹಿಳಾ ಅಧಿಕಾರಿ ಮೇಲೆಯೇ ಪತಿಯಿಂದ ಹಲ್ಲೆ; ಕಚೇರಿಗೆ ನುಗ್ಗಿ ಕೃತ್ಯ

ಶಿವಮೊಗ್ಗ: ಮಹಿಳಾ ಅಧಿಕಾರಿ ಮೇಲೆಯೇ ಪತಿಮಹಾಶಯ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಿಲ್ಪಾ ದೊಡ್ಡಮನಿ ಎಂಬುವವರ ಮೇಲೆ ಅವರ ಪತಿ ಶ್ರೀನಿವಾಸ ಮೂರ್ತಿ ಬೊರ್ಗಿ ಹಲ್ಲೆ ನಡೆಸಿದ್ದಾರೆ. ಪತ್ನಿಯ ಕಚೇರಿಗೆ ಬಂದು ಹಲ್ಲೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಲುಂಗಿಯಲ್ಲಿಯೇ ಪತ್ನಿ ಕಚೇರಿಗೆ ನುಗ್ಗಿದ ಶ್ರೀನಿವಾಸ ಮೂರ್ತಿ, ಶಿಲ್ಪಾ ದೊಡ್ಡಮನಿ ಮೇಲೆ ಹಲ್ಲೆ ನಡೆಸಿದ್ದಾನೆ. ಕಚೇರಿಯ ಸಿಬ್ಬಂದಿಗಳು ಆತನನ್ನು ತಡೆಯಲು ಯತ್ನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಿಲ್ಪಾ ದೊಡ್ಡಮನಿ ಪತಿಯ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular