ಮಂಗಳೂರು : ಕರಾವಳಿಯಲ್ಲಿ ಮತ್ತೊಂದು ವಿಡಿಯೋ ಪ್ರಕರಣ ಬಯಲಿಗೆ ಬಂದಿದ್ದು, ಪಕ್ಕದ ಮನೆಯ ಬಾತ್ ರೂಪ್ ನಲ್ಲಿ ಕ್ಯಾಮೆರಾ ಇಟ್ಟು ಯುವತಿಯ ಸ್ನಾನದ ವಿಡಿಯೋ ಮಾಡಲು ಮುಂದಾಗಿದ್ದ ಯುವಕನ್ನು ಯುವತಿಯೇ ಅಣ್ಣನೇ ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಮಂಗಳೂರು ನಗರ ಹೊರವಲಯದ ಮುಲ್ಕಿಯ ಪಕ್ಷಿಕರೆಯಲ್ಲಿ ಘಟನೆ ನಡೆದಿದ್ದು, ಆರೋಪಿ ಸುಮಂತ್ ಪೂಜಾರಿ(22) ಮೊಬೈಲ್ಯಿಟ್ಟ ಯುವಕ. ಆದರೆ, ಯುವತಿಯ ಬದಲಾಗಿ ಯುವತಿಯ ಅಣ್ಣ ಬಾತ್ ರೂಮ್ ಗೆ ಸ್ನಾನಕ್ಕಾಗಿ ಬಂದಿದ್ದ. ಈ ವೇಳೆ ಮೊಬೈಲ್ ಇರುವುದನ್ನು ಗಮನಿಸಿದ ಯುವತಿಯ ಅಣ್ಣ, ರೆಡ್ ಹ್ಯಾಂಡ್ ಆಗಿ ಹಿಡಿದು ಆರೋಪಿ ಸುಮಂತ್ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ನು ಆರೋಪಿ ಸುಮಂತ್ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಇದೀಗ ಸುಮಂತ್ ವಿರುದ್ದ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಸುಮಂತ್ ಪೂಜಾರಿಯನ್ನು ಮುಲ್ಕಿ ಠಾಣಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.