HomeInternationalಖುಲಾಯಿಸಿದ ಅದೃಷ್ಟ: 45 ಕೋಟಿ ರೂ. ಬಂಪರ್ ಲಾಟರಿ ಬಹುಮಾನ ಗೆದ್ದ ಭಾರತೀಯ

ಖುಲಾಯಿಸಿದ ಅದೃಷ್ಟ: 45 ಕೋಟಿ ರೂ. ಬಂಪರ್ ಲಾಟರಿ ಬಹುಮಾನ ಗೆದ್ದ ಭಾರತೀಯ

ದುಬೈ: ದುಬೈನಲ್ಲಿ ಭಾರತೀಯ ವ್ಯಕ್ತಿಯೊಬ್ಬರು 45 ಕೋಟಿ ರೂಪಾಯಿ ಮೊತ್ತದ ಬಂಪರ್ ಲಾಟರಿ ಬಹುಮಾನ ಗೆದ್ದಿದ್ದಾರೆ.

ಮುಂಬೈ ಮೂಲದ ಸಚಿನ್(47) ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಯುಎಇನಲ್ಲಿ ವಾಸಿಸುತ್ತಿದ್ದಾರೆ. ಸ್ಥಳೀಯವಾಗಿ ಆಯೋಜಿಸುವ ಲಾಟರಿಯಲ್ಲಿ ಅವರು 45 ಕೋಟಿ ರೂಪಾಯಿ ಬಹುಮಾನಗಳಿಸಿದ್ದಾರೆ. 25 ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ಸಚಿನ್ ಸಿಎಡಿ ತಂತ್ರಜ್ಞರಾಗಿದ್ದಾರೆ. ಶನಿವಾರ 139ನೇ ಮಜೂಜ್ ಲಾಟರಿ ಬಹುಮಾನ ಗಳಿಸಿದ್ದಾರೆ. ಪ್ರತಿ ವಾರ ಮಜೂಜ್ ನಲ್ಲಿ ಭಾಗವಹಿಸುತ್ತಿದ್ದ ನನಗೆ ಒಂದು ದಿನ ಗೆಲ್ಲುವ ನಿರೀಕ್ಷೆ ಇತ್ತು, ಈ ಗೆಲುವಿನಿಂದ ನನ್ನ ಕುಟುಂಬ ಮತ್ತು ಜೀವನ ಬದಲಾಗಲಿದೆ ಎಂದು ಸಚಿನ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮತ್ತೊಬ್ಬ ಭಾರತೀಯ ಗೌತಮ್ ಎಂಬುವರು ಇದೇ ಸ್ಪರ್ಧೆಯಲ್ಲಿ 2.25 ಕೋಟಿ ರೂಪಾಯಿ ಬಹುಮಾನ ಗಳಿಸಿದ್ದಾರೆ. ಕಳೆದ ವಾರ ಉತ್ತರ ಪ್ರದೇಶ ಮೂಲದ ಆರ್ಕಿಟೆಕ್ಚರ್ ಆದಿಲ್ ಖಾನ್ ಮುಂದಿನ 25 ವರ್ಷ ಸತತವಾಗಿ ಪ್ರತಿ ತಿಂಗಳು 5.5 ಲಕ್ಷ ರೂ. ಬಹುಮಾನ ಸಿಗುವ ಭರ್ಜರಿ ಲಾಟರಿಯಲ್ಲಿ ವಿಜೇತರರಾಗಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular