ಬೆಂಗಳೂರು : ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯದ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರಿಗೆ ಬಿಗ್ ಶಾಕ್, ವರ್ಗಾವಣೆ ಕೌನ್ಸೆಲಿಂಗ್ ಮತ್ತೊಮ್ಮೆ ಸ್ಥಗಿತವಾಗಿದೆ.
ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರ ಸಾಮಾನ್ಯ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ವೇಳಾಪಟ್ಟಿ ಪ್ರಕಾರ ಜುಲೈ 27-28 ರಂದು ಕೌನ್ಸೆಲಿಂಗ್ ನಡೆಯಬೇಕಿತ್ತು. ಆದರೆ ಜುಲೈ 31 ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಸೋಮವಾರ ನಡೆಯಬೇಕಿದ್ದ ಕೌನ್ಸೆಲಿಂಗ್ ಮತ್ತೆ ಸ್ಥಗಿತಗೊಂಡಿದೆ.
ಪ್ರಾಧ್ಯಾಪಕರ ವರ್ಗಾವಣೆ ಕೌನ್ಸೆಲಿಂಗ್ ಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಬದಲಾವಣೆಯಿಂದ ಮುಂದೂಡಲಾಗಿದೆ. ತಾಂತ್ರಿಕ ಕಾರಣ ಹಾಗೂ ಪ್ರಾಧ್ಯಾಪಕರ ಒತ್ತಾಯದ ಮೇರೆಗೆ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.