HomeAgricultureಕಾಳುಮೆಣಸು ಬೆಳೆಗಾರರಿಗೆ ಬಂಪರ್; ಆರು ವರ್ಷಗಳ ಬಳಿಕ 60,000 ರೂ. ಗಡಿ ದಾಟಿದ 'ಕಪ್ಪು ಬಂಗಾರ'

ಕಾಳುಮೆಣಸು ಬೆಳೆಗಾರರಿಗೆ ಬಂಪರ್; ಆರು ವರ್ಷಗಳ ಬಳಿಕ 60,000 ರೂ. ಗಡಿ ದಾಟಿದ ‘ಕಪ್ಪು ಬಂಗಾರ’

ಕಾಳು ಮೆಣಸು - VS Kannada

‘ಕಪ್ಪು ಬಂಗಾರ’ ಎಂದೇ ಕರೆಯಲ್ಪಡುವ ಕಾಳು ಮೆಣಸು ಬೆಳಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. 6 ವರ್ಷಗಳ ಬಳಿಕ ಮತ್ತೆ 60,000 ರೂಪಾಯಿ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಳವಾಗಬಹುದೆಂಬ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.

ಎಂಟು ದಿನಗಳ ಹಿಂದಿನವರೆಗೂ ಪ್ರತಿ ಕ್ವಿಂಟಾಲ್ ಗೆ 45,000 ರೂಪಾಯಿಗಳಿಂದ 49,000 ರೂಪಾಯಿ ಆಸುಪಾಸಿನಲ್ಲಿದ್ದ ಕಾಳು ಮೆಣಸಿನ ದರ ಸೋಮವಾರದಂದು ಶಿರಸಿ ಮಾರುಕಟ್ಟೆಯಲ್ಲಿ 61,599 ರೂಪಾಯಿಗೆ ಟೆಂಡರ್ ಆಗಿದೆ. ಇದು ಕಾಳುಮೆಣಸು ದಾಸ್ತಾನು ಮಾಡಿದ್ದ ಬೆಳೆಗಾರರಿಗೆ ಸಂತಸ ತಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರು ವರ್ಷಗಳ ಹಿಂದೆ ಅಂದರೆ 2017ರಲ್ಲಿ ಕಾಳುಮೆಣಸಿಗೆ ಇದಕ್ಕಿಂತ ಹೆಚ್ಚಿನ ಬೆಲೆ ಸಿಕ್ಕಿತೆಂದು ಹೇಳಲಾಗಿದ್ದು, ಇದಾದ ಬಳಿಕ ಮತ್ತೆ ಕಾಳುಮೆಣಸಿಗೆ ಬಂಗಾರದ ಬೆಲೆ ಬಂದಿದೆ. ಕಾಳುಮೆಣಸಿಗೆ ಇದುವರೆಗೆ ಸೂಕ್ತ ಬೆಲೆ ಸಿಗದೇ ನಿರಾಸೆಗೊಂಡಿದ್ದ ಬೆಳೆಗಾರರಿಗೆ ಈಗ ನಡೆಯುತ್ತಿರುವ ಬೆಳವಣಿಗೆ ಖುಷಿ ಮೂಡಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular