HomeKarnatakaBIG NEWS: ಸಿಂಗಪುರ್ ರಾಜಕೀಯ ಷಡ್ಯಂತ್ರಕ್ಕೆ ಟ್ವಿಸ್ಟ್ ಕೊಟ್ಟ HDK; ಕುಟುಂಬ ಸದಸ್ಯರೊಂದಿಗೆ ಯುರೋಪ್ ಪ್ರವಾಸದಲ್ಲಿ...

BIG NEWS: ಸಿಂಗಪುರ್ ರಾಜಕೀಯ ಷಡ್ಯಂತ್ರಕ್ಕೆ ಟ್ವಿಸ್ಟ್ ಕೊಟ್ಟ HDK; ಕುಟುಂಬ ಸದಸ್ಯರೊಂದಿಗೆ ಯುರೋಪ್ ಪ್ರವಾಸದಲ್ಲಿ ದಳಪತಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಕೆಡವಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಂಗಾಪುರದಲ್ಲಿ ಕುಳಿತು ಷಡ್ಯಂತ್ರ ನಡೆಸಿದ್ದಾರೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪದ ಬೆನ್ನಲ್ಲೇ ಕುಮಾರಾಸ್ವಾಮಿ ಯುರೋಪ್ ಪ್ರವಾಸದಲ್ಲಿರುವ ಫೋಟೋ ವೈರಲ್ ಆಗಿದೆ.

ಹೆಚ್.ಡಿ.ಕುಮಾರಸ್ವಾಮಿ ಕುಟುಂಬ ಸದಸ್ಯರ ಜೊತೆ ಯುರೋಪ್ ನ ಫಿನ್ ಲ್ಯಾಂಡ್ ನಲ್ಲಿರುವ ಫೋಟೋ ಹಂಚಿಕೊಂಡಿರುವ ಜೆಡಿಎಸ್, ಕಾಂಗ್ರೆಸ್ ನಾಯಕರ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಮಾರಸ್ವಾಮಿ ತಮ್ಮ ಕುಟುಂಬ ಸದಸ್ಯರೊಂದಿಗೆ ಫಿನ್ ಲ್ಯಾಂಡ್ ನಲ್ಲಿರುವ ಫೋಟೋವನ್ನು ಜೆಡಿಎಸ್ ನಾಯಕರು ಬಿಡುಗಡೆ ಮಾಡಿದ್ದಾರೆ. ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಮಾಡಿದ್ದ ಕುಮಾರಸ್ವಾಮಿ ಅಧಿವೇಶನ ಮುಗಿಯುತ್ತಿದ್ದಂತೆಯೇ ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ದರು.

ಇದರ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್, ಸರ್ಕಾರ ಬೀಳಿಸಲು ಸಿಂಗಪುರ್ ನಲ್ಲಿ ಕುಳಿತು ಷಡ್ಯಂತ್ರ ನಡೆಸಿದ್ದಾರೆ ಎಂದು ಹೇಳಿದ್ದರು. ಹೆಚ್.ಡಿ.ಕೆ ವಿದೇಶ ಪ್ರವಾಸದ ನಡುವೆ ಡಿಸಿಎಂ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೆಡವಲು ಹೆಚ್.ಡಿ.ಕೆ. ವಿದೇಶದಲ್ಲಿ ಕುಳಿತು ತಂತ್ರಗಾರಿಕೆ ನಡೆಸುತ್ತಿದ್ದಾರೆಯೇ? ಇದಕ್ಕೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆಯೇ? ಎಂಬಿತ್ಯಾದಿ ಚರ್ಚೆ ಆರಂಭವಾಗಿತ್ತು. ಇದೀಗ ಹೆಚ್.ಡಿ.ಕುಮರಸ್ವಾಮಿ ಕುಟುಂಬ ಸದಸ್ಯರ ಜೊತೆ ಯುರೋಪ್ ಪ್ರವಾಸದಲ್ಲಿರುವ ಫೋಟೋ ಬಿಡುಗಡೆಯಾಗಿದ್ದು ಸಿಂಗಾಪುರ ರಾಜಕೀಯ ಷಡ್ಯಂತ್ರಕ್ಕೆ ಹೆಚ್.ಡಿ.ಕೆ ಟ್ವಿಸ್ಟ್ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular