
ಬುಧವಾರ ಬೆಳಗ್ಗೆ 5:30ಕ್ಕೆ ದೆಹಲಿಯಿಂದ ಟೇಕ್ ಆಫ್ ಆದ ವಿಮಾನದಲ್ಲಿ 24 ವರ್ಷದ ಮಹಿಳಾ ವೈದ್ಯೆ ಪ್ರಯಾಣಿಸುತ್ತಿದ್ದರು. ಇವರ ಪಕ್ಕದ ಸೀಟಿನಲ್ಲಿಯೇ ಪ್ರೊಫೆಸರ್ ಕುಳಿತಿದ್ದು, ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗುವ ಮುನ್ನ ವೈದ್ಯೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎನ್ನಲಾಗಿದೆ.
ಇದರಿಂದಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ವಿಚಾರ ವಿಮಾನ ಸಿಬ್ಬಂದಿಯ ಗಮನಕ್ಕೂ ಬಂದಿದೆ. ಕೂಡಲೇ ಸಿಬ್ಬಂದಿ ಮುಂಬೈ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವಿಮಾನ ಲ್ಯಾಂಡ್ ಆಗುತ್ತಲೆ ಸಹರ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

