HomeIndiaJOB ALERT : 'ಸೇನೆ' ಸೇರ ಬಯಸುವವರಿಗೆ ಗುಡ್ ನ್ಯೂಸ್ : 3500 'ಅಗ್ನಿವೀರ್' ...

JOB ALERT : ‘ಸೇನೆ’ ಸೇರ ಬಯಸುವವರಿಗೆ ಗುಡ್ ನ್ಯೂಸ್ : 3500 ‘ಅಗ್ನಿವೀರ್’ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ನವದೆಹಲಿ: ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್ (ಅಗ್ನಿವೀರ್ ವಾಯು) ಹೊಸ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು, 3500 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗಾಗಿ ಆನ್ ಲೈನ್ ಅರ್ಜಿ ಪ್ರಕ್ರಿಯೆಯು ಜುಲೈ 27 ರಿಂದ ಪ್ರಾರಂಭವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 17, 2023 ರವರೆಗೆ agnipathvayu.cdac.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಲಿಖಿತ ಪರೀಕ್ಷೆಯು ಅಕ್ಟೋಬರ್ 13, 2023 ರಿಂದ ಪ್ರಾರಂಭವಾಗಲಿದೆ.

ಶೈಕ್ಷಣಿಕ ಅರ್ಹತೆ ಏನು..?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇಂಗ್ಲಿಷ್ ನಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳನ್ನು ಪಡೆದಿರಬೇಕು.
ಅಥವಾ 50% ಅಂಕಗಳೊಂದಿಗೆ ಮೂರು ವರ್ಷದ ಎಂಜಿನಿಯರಿಂಗ್ ಡಿಪ್ಲೊಮಾ ಹೊಂದಿರುವವರುಅಥವಾ ಭೌತಶಾಸ್ತ್ರ ಮತ್ತು ಗಣಿತದಂತಹ ಎರಡು ವೃತ್ತಿಪರವಲ್ಲದ ವಿಷಯಗಳೊಂದಿಗೆ ಶೇಕಡಾ 50 ಕ್ಕಿಂತ ಕಡಿಮೆ ಅಂಕಗಳೊಂದಿಗೆ ಎರಡು ವರ್ಷಗಳ ವೃತ್ತಿಪರ ಕೋರ್ಸ್ ಮುಗಿಸಿರಬೇಕು. ಅಭ್ಯರ್ಥಿಗಳು 12 ನೇ ತರಗತಿಯಲ್ಲಿ ಯಾವುದೇ ವಿಷಯದಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಇಂಗ್ಲಿಷ್ ನಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳನ್ನು ಪಡೆದಿರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಯಸ್ಸಿನ ಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಅಂದರೆ, ಅಭ್ಯರ್ಥಿಯು ಜೂನ್ 27, 2003 ಮತ್ತು ಡಿಸೆಂಬರ್ 27, 2006 ರ ನಡುವೆ ಜನಿಸಿರಬೇಕು.ಪುರುಷ ಅಭ್ಯರ್ಥಿಯ ಉದ್ದ ಕನಿಷ್ಠ 152.5 ಸೆಂ.ಮೀ ಮತ್ತು ಮಹಿಳಾ ಅಭ್ಯರ್ಥಿಯ ಉದ್ದ ಕನಿಷ್ಠ 152 ಸೆಂ.ಮೀ ಇರಬೇಕು.
ಅಭ್ಯರ್ಥಿಗಳನ್ನು ಈ ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ
1) ಆನ್ಲೈನ್ ಲಿಖಿತ ಪರೀಕ್ಷೆ.
2)ದೈಹಿಕ ಸಾಮರ್ಥ್ಯ ಪರೀಕ್ಷೆ
3) ವೈದ್ಯಕೀಯ ಪರೀಕ್ಷೆ.

ಆಸಕ್ತ ಅಭ್ಯರ್ಥಿಗಳು agnipathvayu.cdac.in ಮೂಲಕ ಅರ್ಜಿ ಸಲ್ಲಿಸಬಹುದು,  ಹಾಗೂ ಹೆಚ್ಚಿನ ಮಾಹಿತಿಗಾಗಿ https://agnipathvayu.cdac.in/AV/img/upcoming/AGNIVEER_VAYU_01-2024.pdf ವೀಕ್ಷಿಸಬಹುದಾಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular