HomeKarnatakaBIG NEWS : ಮಂಡ್ಯದ ವಿಸಿ ನಾಲೆಗೆ ಬಿದ್ದ ಕಾರು : ನಾಪತ್ತೆಯಾಗಿದ್ದ ಚಾಲಕನ...

BIG NEWS : ಮಂಡ್ಯದ ವಿಸಿ ನಾಲೆಗೆ ಬಿದ್ದ ಕಾರು : ನಾಪತ್ತೆಯಾಗಿದ್ದ ಚಾಲಕನ ಮೃತದೇಹ ಪತ್ತೆ

ಮಂಡ್ಯ : ಮಂಡ್ಯದ ವಿಸಿ ನಾಲೆಗೆ ನಿಯಂತ್ರಣ ತಪ್ಪಿ ಕಾರು ಸಮೇತ ಬಿದ್ದಿದ್ದ ಚಾಲಕನ ಶವ ಪತ್ತೆಯಾಗಿದೆ. ದುರಂತ ನಡೆದ 1 ಕಿಮೀ ದೂರದಲ್ಲಿ ಚಾಲಕ ಲೋಕೇಶ್ ಶವ ಪತ್ತೆಯಾಗಿದೆ.

ಮಂಡ್ಯದ ತಿಬ್ಬನಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ.ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ನಾಲೆಗೆ ಉರುಳಿ ಬಿದ್ದಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ನಡೆಸಿ ಕಾರನ್ನು ಮೇಲಕ್ಕೆತ್ತಲಾಗಿತ್ತು, ಆದರೆ ಲೋಕೇಶ್ ಶವ ಪತ್ತೆಯಾಗಿರಲಿಲ್ಲ. ಇಂದು ದುರಂತ ನಡೆದ 1 ಕಿಮೀ ದೂರದಲ್ಲಿ ಚಾಲಕ ಲೋಕೇಶ್ ಶವವನ್ನು ಅಗ್ನಿಶಾಮಕ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.

ಏನಿದು ಘಟನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೋಕೇಶ್ ಎಂಬಾತ ಕಾರು ಚಲಿಸಿಕೊಂಡು ಬರುತ್ತಿದ್ದನು. ಆದರೆ, ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿಯೇ ತುಂಬಿ ಹರಿಯುತ್ತಿದ್ದ ನಾಲೆಯೊಳಗೆ ಬಿದ್ದಿದೆ. ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಅಪಘಾತ ನಡೆಯುತ್ತಿದ್ದಂತೆ ಕಾರಿನ ಕಿಟಕಿ ಗಾಜು ಒಡೆದು ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದನು. ಆದರೆ ನಾಪತ್ತೆಯಾದ ಚಾಲಕನಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಲೋಕೇಶ್ (45) ಮಂಡ್ಯ ತಾಲೂಕಿನ ಶಿವಹಳ್ಳಿ ಗ್ರಾಮದವರಾಗಿದ್ದು, ಶಿವಹಳ್ಳಿಯಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದರು ಎನ್ನಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular